ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಏರ್‌ಸೆಲ್ ಟೆಲಿಕಾಂನಿಂದ ಹೆಚ್ಚುವರಿ ಕೊಡುಗೆ

ಏರ್‌ಸೆಲ್ ಟೆಲಿಕಾಂ ಸಂಸ್ಥೆ ಕರ್ನಾಟಕದ ಗ್ರಾಹಕರಿಗೆ ಹೆಚ್ಚುವರಿ ಕೊಡುಗೆ ನೀಡಲು ನಿರ್ಧರಿಸಿದೆ. ಈಗಾಗಲೇ ಇರುವ ಏರ್‌ಸೆಲ್ 3ಜಿ...

Srinivasa Murthy VN
Updated On : 29 Jul 2013, 1:21 am

ಬೆಂಗಳೂರು: ಏರ್‌ಸೆಲ್ ಟೆಲಿಕಾಂ ಸಂಸ್ಥೆ ಕರ್ನಾಟಕದ ಗ್ರಾಹಕರಿಗೆ ಹೆಚ್ಚುವರಿ ಕೊಡುಗೆ ನೀಡಲು ನಿರ್ಧರಿಸಿದೆ. ಈಗಾಗಲೇ ಇರುವ ಏರ್‌ಸೆಲ್ 3ಜಿ ಮಾರ್ನಿಂಗ್ಸ್ ಜತೆಗೆ ಏರ್‌ಸೆಲ್‌ನಿಂದ ಏರ್‌ಸೆಲ್‌ಗೆ 30ದಿನಗಳ ಅವಧಿಗೆ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ವಾಯ್ಸ್ ಇಂಟರ್‌ವೆನ್ಷನ್ ಉಚಿತವಾಗಿರುತ್ತದೆ. ಈ ಸೇವೆ ಪಡೆಯಲು ಚಂದಾದಾರರು ಶ್ರೀ121ಶ್ರೀ123 ಗೆ ಕರೆಮಾಡಿ ವಾಯ್ಸ್ ಮತ್ತು ದತ್ತಾಂಶವನ್ನು ಚಂದಾದಾರರು ಏರ್‌ಸೆಲ್ ಫ್ರೀ ಮಾರ್ನಿಂಗ್ಸ್‌ನಲ್ಲಿ ದರ ಅಥವಾ ವೇಗಕ್ಕೆ ಸಂಬಂಧಿಸಿ ಯಾವುದೇ ನಿಬಂಧನೆ ಇಲ್ಲದೆ ಪಡೆಯಬಹುದು. ಏರ್‌ಸೆಲ್‌ನ ಕರ್ನಾಟಕ ವೃತ್ತದ ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ. ಕದಿವರನ್ ನಾವು ಉದ್ಯಮದಲ್ಲಿಯೇ ಮೊದಲನೆಯದು ಎನ್ನಬಹುದಾದ ಮತ್ತೊಂದು ವಿನೂತನ ಎ2ಎ ಸ್ಥಳೀಯ ಕರೆ ಸೌಲಭ್ಯವನ್ನು ಏರ್‌ಸೆಲ್ ಫ್ರೀ ಮಾರ್ನಿಂಗ್ಸ್‌ನಲ್ಲಿ ನೀಡುತ್ತಿದ್ದೇವೆ. ಇದರಿಂದ ಗ್ರಾಹಕರಿಗೆ ಎಕ್ಸ್‌ಟ್ರಾ ಸೇವೆ ಸೌಲಭ್ಯದ ಸೇವೆ ಸಿಕ್ಕಿದಂತಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಷಿಬಾ ಟಚ್‌ಸ್ಕ್ರೀನ್ ಸಿ ಸರಣಿ ಲ್ಯಾಪ್‌ಟಾಪ್
ತೋಷಿಬಾ ಸಂಸ್ಥೆ ಹೊಸ ಪೀಳಿಗೆಯ ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆಧುನಿಕ ಪೀಳಿಗೆಯ ಗ್ರಾಹಕರು ಬಹುದಿನಗಳಿಂದ ಕಾತುರದಿಂದ ನಿರೀಕ್ಷಿಸುತ್ತಿದ್ದ ಟಚ್‌ಸ್ಕ್ರೀನ್ ಸಿ ಸರಣಿ ಲ್ಯಾಪ್‌ಟಾಪ್‌ಗಳಲ್ಲಿ ಲಭ್ಯವಿದೆ. ಈ ಸರಣಿಯನ್ನು ಬಿಡುಗಡೆ ಮಾಡಿದ ತೋಷಿಬಾ ಸಂಸ್ಥೆಯ ಭಾರತೀಯ ಉಸ್ತುವಾರಿ ಅಧಿಕಾರಿ ಸಂಜಯ್ ವಾರ್ಕೆ ಅವರು, ತೋಷಿಬಾ ಸಂಸ್ಥೆ ತನ್ನ ಹೊಸ ಆವಿಷ್ಕಾರಗಳಿಗೆ ಹೆಸರಾಗಿದ್ದು, ನವನವೀನ ಆವಿಷ್ಕಾರಗಳಿಗೆ ಬದ್ಧವಾಗಿದೆ ಎಂದರು. ಸೆಟಲೈಟ್ ಪಿ ಹಾಗೂ ಸೆಟಲೈಟ್ ಎಸ್ ಮಾದರಿ ಸರಿಗಟ್ಟಲಾರದ ತಂತ್ರಜ್ಞಾನ ಮತ್ತು ನೋಟವನ್ನು ಹೊಂದಿದೆ. ಇರುವ ತಂತ್ರಜ್ಞಾನದ ಜತೆಗೆ ಧ್ವನಿ ವ್ಯವಸ್ಥೆ ಅಳವಡಿಸಲಾಗಿದ್ದು, ಸೆಟಲೈಟ್ ಎಲ್ ಮತ್ತು ಸೆಟಲೈಟ್ ಸಿ ಸರಣಿ ಲ್ಯಾಪ್‌ಟಾಪ್‌ಗಳನ್ನು ಪ್ರಾರಂಭಿಕ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ಬೆಲೆ 38,000ರಿಂದ ಪ್ರಾರಂಭ.

ಆ.8ರಂದು ಟಿಸಿಎಸ್ ಐಟಿ ವಿಜ್ 2013
ದೇಶದ ಬೃಹತ್ ಐಟಿ ಸಂಸ್ಥೆ ಟಾಟಾ ಕನ್ಸೆಲ್ಟೆನ್ಸಿ, ಟಿಸಿಎಸ್ ಐಟಿ ವಿಜ್ 2013ರ ಬೆಂಗಳೂರು ಆವೃತ್ತಿ ಘೋಷಿಸಿದೆ. ನಗರದ ಸ್ಯಾಂಕಿಟ್ಯಾಂಕಿ ಬಳಿ ಇರುವ ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಆ.8ರಂದು ಕ್ವಿಜ್ ನಡೆಯಲಿದೆ. 8ರಿಂದ 12ನೇ ತರಗತಿವರೆಗಿನ ಮಕ್ಕಳಿಗಾಗಿ ಕ್ವಿಜ್ ನಡೆಯಲಿದ್ದು, ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ. ಪ್ರತಿಯೊಂದು ಶಿಕ್ಷಣ ಸಂಸ್ಥೆ 2 ಜನರ 2ತಂಡವನ್ನು ಕಳುಹಿಸಬಹುದು. TCS IT Wiz Coordinator, Tata Consultancy Services, #18, Sheshadri Road, Gandhinagar, Bangalore- 560009. ಅಥವಾ ಅಂತರ್ಜಾಲದಲ್ಲಿ  www.tcsitwiz.com ತಾಣದ ಮೂಲಕ ಪ್ರವೇಶ ಕಳುಹಿಸಬಹುದು.

ಗ್ರೀನ್‌ಪ್ಲೈನ ನೂತನ ಮಳಿಗೆ ಆರಂಭ
ಗ್ರೀನ್‌ಪ್ಲೈ ಇಂಡಸ್ಟ್ರೀಸ್ ಲಿಮಿಟೆಡ್, ಗ್ರಾಹಕರನ್ನು ಪರಿಣಾಮಕಾರಿಯಾಗಿ ತಲುಪುವುದಕ್ಕಾಗಿ ನೂತನ ಮಿಕಾ ಮಳಿಗೆಯನ್ನು ಸ್ಥಾಪಿಸಿದೆ. ಈ ಮಳಿಗೆಯಲ್ಲಿ ಗ್ರಾಹಕರಿಗೆ ಹೊಸ ಮಿಕಾ ಲ್ಯಾಮಿನೇಟ್ಸ್, ವುಡ್‌ಟ್ರೆಂಡ್ ವಿನೀರ್ ವ್ಯಾಪ್ತಿಯ ಎಲ್ಲ ಉತ್ಪನ್ನಗಳು ಪ್ರದರ್ಶನಕ್ಕೆ ಲಭ್ಯವಿದೆ. ಈ ವಿಶೇಷ ಮಳಿಗೆಯಲ್ಲಿ ಗ್ರೀನ್‌ಪ್ಲೈ ತಮ್ಮ ಕನಸಿನ ಮನೆಯ ಒಳಾಂಗಣ ಅಲಂಕಾರದ ಪ್ರಥಮ ನೋಟದ ಅನುಭವ ಪಡೆಯಲು ಅವಕಾಶ ಕಲ್ಪಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರೀನ್‌ಪ್ಲೈ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಪ್ರಾದೇಶಿಕ ಮುಖ್ಯಸ್ಥ ಎಂ.ಪಿ. ರಾಜಪ್ರಸಾದ್ 'ನಗರದಲ್ಲಿನ ವಿಸ್ಕೃತ ಮಾರುಕಟ್ಟೆ ದೃಷ್ಟಿಯಿಂದ  ಒಳಾಂಗಣ ವಿನ್ಯಾಸಕ್ಕೆ ಸಂಸ್ಥೆ ಹೆಚ್ಚಿನ ಒತ್ತು ನೀಡಲಿದೆ' ಎಂದರು. ಮಿಕಾ ಒಟ್ಟು 855 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಮಳಿಗೆಯು 205, 7ನೇ ಅಡ್ಡರಸ್ತೆ, 6ನೇ ಬ್ಲಾಕ್, ಬಿ.ಎಸ್.ಕೆ. 3ನೇ ಹಂತ, ಬೆಂ-85 ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಹಕರು ಸಂಪರ್ಕಿಸಬಹುದು.

ಐಶ್ವರ್ಯ ಇಂಡಸ್ಟ್ರೀಸ್‌ನಿಂದ ಗ್ರೀನ್ ಟೀ ಪರಿಚಯ

ಚಹಾ ತಯಾರಿಕೆಯಲ್ಲಿ ಹೆಸರಾಗಿರುವ ಐಶ್ವರ್ಯ ಟೀ ಇಂಡಸ್ಟ್ರೀಸ್ ಚಹಾ ಪ್ರಿಯರಿಗೆ ರುಚಿ, ಸುವಾಸನೆ ಮತ್ತು ಆರೋಗ್ಯಭರಿತ ಗುಣಗಳನ್ನು ಹೊಂದಿರುವ ಹೊಸ ಐಶ್ವರ್ಯ ಗ್ರೀನ್ ಟೀಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಳಲಿಕೆ ದೂರಮಾಡಲು, ಉತ್ತೇಜನ ಹೆಚ್ಚಿಸಲು, ಚರ್ಮದ ಕಾಂತಿಯನ್ನು ವೃದ್ಧಿಸಲು ಹಾಗೂ ದೈನಂದಿನ ಒತ್ತಡದಿಂದ ಬಿಡುಗಡೆಗೊಳ್ಳಲು ಇದು ಉತ್ತಮ ಆಯ್ಕೆಯಾಗಿದೆ. ಗ್ರೀನ್ ಟೀ ಸೇವಿಸುವುದರಿಂದ ಮಾನಸಿಕ ಒತ್ತಡ ಕಡಿಮೆಗೊಳಿಸಲು ಸಾಧ್ಯ. ಮೆದುಳು ಚೇತೋಹಾರಿಯಾಗಿರಲು ಸಹಾಯ ಮಾಡುತ್ತದೆ. ಈ ಕುರಿತು ಮಾತನಾಡಿದ ಕಂಪನಿ ನಿರ್ದೇಶಕ ದೀಪಕ್ ನಾಯಕ್ 'ಐಶ್ವರ್ಯ ಟೀ ಇಂಡಸ್ಟ್ರೀಸ್ ಪರಿಚಯಿಸುತ್ತಿರುವ ಐಶ್ವರ್ಯ ಗ್ರೀನ್ ಟೀ ಎಲ್ಲಾ ಬಗೆಯ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿದೆ. ಪ್ರತಿಯೊಬ್ಬ ಚಹಾ ಪ್ರಿಯರಿಗೂ ಇದು ಇಷ್ಟವಾಗುತ್ತದೆ' ಎಂದು ಹೇಳಿದ್ದಾರೆ.

ಗ್ರಾಂಡ್ ವಿಷನ್ ಲೆನ್ಸ್‌ನಲ್ಲಿ ರಿಯಾಯಿತಿ
ರಿಲಯನ್ಸ್ ರಿಟೇಲ್ ಮತ್ತು ಗ್ರಾಂಡ್ ವಿಷನ್ ಬಿ.ವಿ.ಯ 50-50 ಜಂಟಿ ಸಹಭಾಗಿತ್ವವಾಗಿರುವ ವಿಷನ್ ಎಕ್ಸ್‌ಪ್ರೆಸ್ ಹೊಸ ಆಫರ್‌ನ್ನು ಘೋಷಿಸಿದೆ. ಗ್ರಾಹಕರು ಮೂರು ಬಾಕ್ಸ್ ಕಾಂಟಾಕ್ಟ್ ಲೆನ್ಸ್‌ಗಳನ್ನು ಖರೀದಿಸಿದರೆ ಒಂದು ಬಾಕ್ಸ್ ಉಚಿತವಾಗಿ ಪಡೆಯುವ ಅವಕಾಶವನ್ನು ಈ ಮೂಲಕ ನೀಡುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ  ವಿಷನ್ ಎಕ್ಸ್‌ಪ್ರೆಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೂಯ್ಯಂ ಬ್ರೌನೇಟ್ 'ಸ್ಪಂದಕ ಹಾಗೂ ಅತಿ ವೇಗದಲ್ಲಿ ಬೆಳೆಯುತ್ತಿರುವ ಬ್ರಾಂಡ್ ಆಗಿರುವ ವಿಷನ್ ಎಕ್ಸ್‌ಪ್ರೆಸ್, ನಮ್ಮ ಗ್ರಾಹಕರನ್ನು ನಮ್ಮ ಸ್ಟೈಲಿಶ್ ಮತ್ತು ಟ್ರೆಂಡೀ ಉತ್ಪನ್ನ ಶ್ರೇಣಿಯ ಮೂಲಕ ಉತ್ತೇಜನಗೊಳಿಸುವಲ್ಲಿ ನಂಬಿಕೆ ಹೊಂದಿದೆ. ಈ ಆಫರ್ ಗ್ರಾಹಕರಿಗೆ ಲಾಭ ಕೊಡುವ ಶಕ್ತಿಶಾಲಿ ಟ್ರಿಗರ್ ಆಗಲಿದ್ದು ಜತೆಗೆ ವಿಷನ್ ಎಕ್ಸ್‌ಪ್ರೆಸ್ ಪ್ರತಿದಿನವೂ ಆರಾಮದಾಯಕ ಮತ್ತು ದೃಷ್ಟಿ ಪರಿಪೂರ್ಣತೆಯನ್ನು ಒದಗಿಸಲಿದೆ' ಎಂದರು.

ಯುನಿವರ್ಸೆಲ್ ಸಿಂಕ್ ನೂತನ ಮಳಿಗೆ ಉದ್ಘಾಟನೆ
ಮೊಬೈಲ್ ರಿಟೈಲರ್ ಯುನಿವರ್ಸೆಲ್ ನಗರದ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಯುನಿವರ್ಸೆಲ್ ಸಿಂಕ್ ಹೆಸರಿನ ನೂತನ ಟೆಕ್‌ಸ್ಪೀರಿಯನ್ಸ್ ಸ್ಟೋರ್‌ನ್ನು ಬಿಡುಗಡೆಗೊಳಿಸಿತು. ಈ ಮಳಿಗೆಯು ಹಿಪ್, ತಾಜಾ ಮತ್ತು ಜೆನ್ ವೈ ಫ್ರೆಂಡ್ಲಿ ಟೆಕ್ ತಾಣವಾಗಿ ತನ್ನನ್ನು ರೂಪಾಂತರಿಸಿಕೊಂಡು ಪ್ರಸ್ತುತಪಡಿಸುತ್ತಿದೆ. ಸಿನಿತಾರೆ ಐಂದ್ರಿತಾ ರೇ ಮಳಿಗೆಯನ್ನು ಉದ್ಘಾಟಿಸಿದರು. ಸಿಂಕ್ ಪರಿಣಾಮ ಬೀರುವಂತಿರಲಿ, ಮಳಿಗೆಯನ್ನು ಕೂಲ್ ಮತ್ತು ಕ್ಲೀನ್ ಆಗಿಡಿ ಎಂದು ಹೇಳಿದರು. ಯುನಿವರ್ಸೆಲ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತೀಶ್ ಬಾಬು ಮಾತನಾಡಿ, ಯುನಿವರ್ಸೆಲ್ ನಿಜವಾಗಿಯೂ ಜನರು ಮತ್ತು ತಂತ್ರಜ್ಞಾನವನ್ನು  ಅರ್ಥೈಸಿಕೊಂಡಿದೆ ಎಂದರು.

ಸನ್ ಡೈರೆಕ್ಟ್ ಸಿನಿಮಾ ಜೊತೆ ಸ್ಫೋರ್ಟ್ಸ್ ಚಾನೆಲ್
ಸನ್ ಡೈರೆಕ್ಟ್ ಸಿನಿಮಾ ಪ್ಲಸ್ ಕೊಡುಗೆ ಆರಂಭವಾಗಿ 2ವರ್ಷ ತುಂಬಿರುವ ಸಂದರ್ಭದಲ್ಲಿ 130೤ ಚಾನಲ್‌ಗಳನ್ನು ಒಳಗೊಂಡಿರುವ ಸಿನಿಮಾ ೤ ಸ್ಪೋರ್ಟ್ಸ್ ಪ್ಯಾಕ್ ಮಾಸಿಕ ಕೇವಲ 185ಗಳ ಮೌಲ್ಯಕ್ಕೆ ಲಭ್ಯವಿದೆ. ಸ್ಟಾರ್ ಕ್ರಿಕೆಟ್, ಇಎಸ್‌ಪಿಎನ್, ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಟಾರ್ ಸ್ಪೋರ್ಟ್ಸ್2, 11ಚಾನಲ್‌ಗಳ ಆಯ್ಕೆ ಕೇವಲ ಸನ್‌ಡೈರೆಕ್ಟ್‌ನೊಂದಿಗೆ ಡಿಟಿಎಚ್‌ನಲ್ಲಿ ಮಾತ್ರ ಲಭ್ಯವಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಡೆರಹಿತ ಮೂವಿಗಳು- ದಿನವಿಡೀ ಸಿನೆಮಾ ಕ್ಲಬ್ ಮೂವೀಸ್ ಲಭ್ಯವಿದೆ. 165 ರೀಚಾರ್ಜ್ ಆಯ್ಕೆಯ ಪರಿಣಾಮಕಾರಿ ದರದಲ್ಲಿ 6ತಿಂಗಳಿಗೆ 990ರ ಪ್ಯಾಕ್. ಸ್ಟ್ಯಾಂಡರ್ಡ್ ಡೆಫಿನೀಷನ್‌ನ ಹೊಸ ಸಂಪರ್ಕಕ್ಕೆ 1890 ಮತ್ತು ಹೈ ಡೆಫಿನಿಷನ್‌ನ ಹೊಸ ಸಂಪರ್ಕಕ್ಕೆ 2,290. ಈ ಕುರಿತು ಮಾತನಾಡಿದ ಸನ್ ಡೈರಕ್ಟ್‌ನ ನಿರ್ದೇಶಕ ಮಹೇಶ್‌ಕುಮಾರ್ ಈ ಹೊಸ ಪ್ಯಾಕ್ ಮೂಲಕ ನಾವು ನಮ್ಮ ಚಂದಾದಾರರಿಗೆ ಉತ್ತಮ ಮೌಲ್ಯ ಮತ್ತು ಸೇವೆಯನ್ನು ಒದಗಿಸುತ್ತಿದ್ದೇವೆ. ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಕೊಡುಗೆಗಳ ಮೂಲಕ ನಾವು ಮನೋರಂಜನೆಗೆ ಹೊಸ ಅರ್ಥ ಕಲ್ಪಿಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement