ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸಿಂಡಿಕೇಟ್‌ನ 88 ಶಾಖೆ ಆರಂಭ

ಸಿಂಡಿಕೇಟ್ ಬ್ಯಾಂಕ್‌ನ 88ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ರಾಷ್ಟ್ರಾದ್ಯಂತ 88 ಶಾಖೆಗಳನ್ನು ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಿಸಲಾಗಿದೆ...

Srinivasa Murthy VN
Updated On : 21 Oct 2013, 11:12 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.20-
ಸಿಂಡಿಕೇಟ್ ಬ್ಯಾಂಕ್‌ನ 88ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ರಾಷ್ಟ್ರಾದ್ಯಂತ 88 ಶಾಖೆಗಳನ್ನು ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಎಸ್.ಕೆ. ಜೈನ್ ಹೇಳಿದ್ದಾರೆ.
ಸಂಸ್ಥಾಪನೆ ದಿನಾಚರಣೆ ಹಿನ್ನೆಲೆಯಲ್ಲಿ 39 ಪ್ರಾದೇಶಿಕ ಕಚೇರಿಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಇದಲ್ಲದೇ ಗ್ರಾಹಕರಿಗೆ ಸಿಂಡ್ ಡಾಕ್ಟರ್, ಗ್ರಾನೈಟ್, ಟೆಕ್ಸ್‌ಟೈಲ್ಸ್, ಕ್ಯಾಷ್ಯೂ ಹಾಗೂ ಟ್ರಾನ್ಸ್‌ಪೋರ್ಟ್ ಎಂಬ ಹೊಸ 5 ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಮೂಲಕ ದೇಶದಲ್ಲಿನ ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳ ಅಭಿವೃದ್ಧಿಗೆ ಬ್ಯಾಂಕ್ ನಿರ್ಧರಿಸಿದೆ ಎಂದು ಅವರು ನಗರದಲ್ಲಿ ಭಾನುವಾರ ನಡೆದ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.
ಉಪೇಂದ್ರ ಪೈ, ಟಿ.ಎಂ.ಎ.ಪೈ ಹಾಗೂ ವಿ.ಎಸ್. ಕುಡ್ವಾ ಅವರು ಕರಾವಳಿ ಭಾಗಕ್ಕೆ ಸೀಮಿತವಾಗಿ ಬ್ಯಾಂಕ್ ಕಟ್ಟಿದ್ದರು. ಅವರ ದೂರದೃಷ್ಟಿಯ ಫಲವಾಗಿಯೇ ಇಂದು ಬ್ಯಾಂಕಿಗೆ 3.30 ಕೋಟಿ ಗ್ರಾಹಕರಿದ್ದಾರೆ. ಹಿಂದಿನ ಆರ್ಥಿಕ ವರ್ಷದಲ್ಲಿ 3.46 ಲಕ್ಷ ಕೋಟಿ ವ್ಯವಹಾರ ನಡೆಸಲಾಗಿದೆ. ಮುಂಬರುವ 2016ರ ಆರ್ಥಿಕ ವರ್ಷದೊಳಗೆ ವ್ಯವಹಾರ ಮೊತ್ತವನ್ನು 6 ಲಕ್ಷ ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಎಂ. ಆಂಜನೇಯ ಪ್ರಸಾದ್ ಹಾಗೂ ಟಿ.ಕೆ. ಶ್ರೀವಾಸ್ತವ್ ಉಪಸ್ಥಿತರಿದ್ದರು. ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement