ಟಾಟಾ ಸ್ಕೈ ಜೊತೆಗೆ ಜೇಬಲ್ಲಿ ಟಿವಿ
ಟಾಟಾ ಸ್ಕೈ ತನ್ನ ಗ್ರಾಹಕರಿಗಾಗಿ ಹೊಸ ಸೇವೆ ಆರಂಭಿಸಿದೆ. 'ಎವೆರಿವೇರ್ ಟಿವಿ' (ಎಲ್ಲೆಲ್ಲೂ ಟಿವಿ) ಘೋಷ ವಾಕ್ಯದೊಂದಿಗೆ ಪ್ರಯಾಣದಲ್ಲಿರುವಾಗಲೇ ತಮ್ಮ ಆಯ್ಕೆಯ ಚಾನೆಲ್ಗಳನ್ನು ವೀಕ್ಷಿಸಲು ಅನುವಾಗುವಂತೆ ಇದರಲ್ಲಿ ವ್ಯವಸ್ಥೆಯುಂಟು. ಮೊಬೈಲ್ಗಳಿಗಾಗಿ ವಿಶೇಷ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶಗಳಿವೆ. ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಸ್ಟೋರ್ಗಳಿಂದ ಟಾಟಾ ಸ್ಕೈ ತಂತ್ರಾಂಶಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ 'ಎವೆರಿವೇರ್ ಟಿ.ವಿ' ಸೇವೆಯನ್ನು ಪಡೆದುಕೊಳ್ಳಬಹುದು.
ಮೆಟ್ಲೈಫ್ಗೆ ವಿದಾಯ?
ಸರ್ಕಾರಿ ಸ್ವಾಮ್ಯದ ಜಮ್ಮು- ಕಾಶ್ಮೀರ ಬ್ಯಾಂಕ್ ಖಾಸಗಿ ವಿಮಾ ಸಂಸ್ಥೆ ಮೆಟ್ಲೈಫ್ ಜತೆಗೆ ಹೊಂದಿದ್ದ ಸಹಭಾಗಿತ್ವವನ್ನು ಕೊನೆಗೊಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಶೇ.11ರಷ್ಟು ಇರುವ ಪಾಲಿನಿಂದ ಶೇ.5ಕ್ಕೆ ಇಳಿಸಲು ಬ್ಯಾಂಕ್ ಮುಂದಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 118.1 ಮಿಲಿಯನ್ ಷೇರುಗಳನ್ನು ಮಾರುವ ಮೂಲಕ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ರು. 190 ಕೋಟಿ ಗಳಿಸಿಕೊಂಡಿದೆ.