ರಣಬೀರ್ ಲೆನೊವೊ ರಾಯಭಾರಿ
ಬಾಲಿವುಡ್ ಜನಪ್ರಿಯ ನಟ ರಣಬೀರ್ ಕಪೂರ್ ಈಗ ಲೆನೊವೊ ರಾಯಭಾರಿ.
ಬಾಲಿವುಡ್ ಜನಪ್ರಿಯ ನಟ ರಣಬೀರ್ ಕಪೂರ್ ಈಗ ಲೆನೊವೊ ರಾಯಭಾರಿ. ಲೆನೊವೊ ಸಂಸ್ಥೆ ತನ್ನ ಉತ್ಪನ್ನಗಳ ಪ್ರಚಾರಕ್ಕಾಗಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ವಿಶೇಷವಾಗಿ, ರಣಬೀರ್ ಲೆನೊವೊ ಪಿಸಿ ಮತ್ತು ಟ್ಯಾಬ್ಲೆಟ್ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಣಬೀರ್, ಟಿವಿ ಮತ್ತು ಆನ್ಲೈನ್ ಮಾಧ್ಯಮದಲ್ಲಿ ರಾಯಭಾರಿಯಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಬಾಲಿವುಡ್ನಲ್ಲಿ ಯಶಸ್ವಿ ಚಿತ್ರಗಳ ಮೂಲಕ ಯುವ ಮನಸ್ಸುಗಳಿಗೆ ಲಗ್ಗೆ ಹಾಕಿರುವ ರಣಬೀರ್ ಜನಪ್ರಿಯತೆ ಈಗ ಲೆನೊವೊ ಮಾರುಕಟ್ಟೆಗೂ ವ್ಯಾಪಿಸುತ್ತಿದೆ. 'ಸಂಸ್ಥೆಯು ಹೆಚ್ಚಿನ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ರಣಬೀರ್ ಶ್ರಮಿಸಲಿದ್ದಾರೆ' ಎಂದು ಲೆನೊವೊ ಇಂಡಿಯಾ ಸ್ಮಾರ್ಟ್ಫೋನ್ ವಿಭಾಗ ನಿರ್ದೇಶಕ ಸುಧೀನ್ ಮಾಥುರ್ ಹೇಳಿದ್ದಾರೆ.
ಡಿಟಿಎಚ್ನಿಂದ ಹೊಸ ಚಾನೆಲ್
ಕ್ರಿಕೆಟ್ ಸೇರಿದಂತೆ ಜನಪ್ರಿಯ ಕ್ರೀಡೆಗಳನ್ನು ಇಷ್ಟ ಪಡುವವರಿಗೆ ಸಂತಸದ ಸುದ್ದಿ. ಡಿಟಿಎಚ್ ಸೇವೆ ನೀಡುತ್ತಿರುವ ವಿಡಿಯೋಕಾನ್ ಡಿಟುಎಚ್, ಸ್ಪೋರ್ಟ್ಸ್ ವಲಯದಲ್ಲಿ ಹೊಸದಾಗಿ ಮೂರು ಪೇ ಚಾನಲ್ಗಳನ್ನು ನೀಡುವುದಾಗಿ ಘೋಷಿಸಿದೆ. ಗೋಲ್ಡ್ ಮ್ಯಾಕ್ಸಿ ತಿಂಗಳಿಗೆ 260ರಂತೆ ಹಾಗೂ ಸೌತ್ ಸಿಲ್ವರ್ ಮ್ಯಾಕ್ಸಿ ಪ್ಯಾಕ್ ತಿಂಗಳಿಗೆ 205 ಮತ್ತು ಸೌತ್ ಗೋಲ್ಡ್ ಮ್ಯಾಕ್ಸಿ ಪ್ಯಾಕ್ ತಿಂಗಳಿಗೆ ರು. 270ರಂತೆ ಲಭ್ಯವಾಗಲಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ವಿಡಿಯೋಕಾನ್ ಡಿಟುಎಚ್ ಈ ವಿಶೇಷ ಸೇವೆ ನೀಡುತ್ತಿದ್ದು, ಸಂಸ್ಥೆ ತನ್ನ ಹಾದಿಯಲ್ಲಿ ಮತ್ತಷ್ಟು ಕ್ರಮಿಸಲು ಇದು ನೆರವಾಗಲಿದೆ ಎಂದು ಸಂಸ್ಥೆಯ ನಿರ್ದೇಶಕ ಸೌರಭ್ ಧೂತ್ ಹೇಳಿದ್ದಾರೆ.
ಬೇಸಿಗೆ ಅನುಭವಕ್ಕೆ 'ಪಾರ್ಕ್ಸ್'
ಬೇಸಿಗೆಯ ಆರಾಮದಾಯಕ ಅನುಭವಕ್ಕಾಗಿ ಪಾರ್ಕ್ಸ್ ಹೊಸ ಸಂಗ್ರಹಗಳನ್ನು ಹೊರತಂದಿದೆ. ನವೀನ ಪೀಳಿಗೆಯ ಜನರು ಇಷ್ಟಪಡುವ ಜಾಕೆಟ್ಸ್, ನಿಟ್ಸ್ ಸೇರಿದಂತೆ ವಿನೂತನ ಮಾದರಿಯ ಉಡುಪು ಇಲ್ಲಿ ಲಭ್ಯವಾಗಲಿವೆ. ವಿನ್ಯಾಸಗಾರರ ಆಯ್ಕೆಯಲ್ಲಿ ಷರ್ಟ್ಸ್, ಜಾಕೆಟ್ಸ್ ಆಕರ್ಷಣೀಯವಾಗಿವೆ. ರಜೆ ದಿನಗಳಲ್ಲಿ ಆರಾಮದಾಯಕವಾಗಿ ನೀವು ತೊಡಬಹುದಾದ ಉಡುಗೆ ಹೊಸ ವಿನ್ಯಾಸದಲ್ಲಿ ಸಿಗುತ್ತವೆ. ಪಾರ್ಕ್ಸ್ ನವೀನ ಮಾದರಿಯ ಉಡುಗೆ ಉತ್ಪನ್ನದಲ್ಲಿ ಮುಂಚೂಣಿಯಲಿದ್ದು, ಈಗ ಬೇಸಿಗೆ ಉಡುಪುಗಳ ಮೂಲಕವೂ ಗಮನ ಸೆಳೆಯುತ್ತಿದೆ. ಹೊಸ ಸಂಗ್ರಹಗಳ ಉಡುಪುಗಳಲ್ಲಿ ಸರಾಸರಿ ದರ ರು. 1599 ರಷ್ಟಾಗಿದೆ. ಕಡಿಮೆ ದರದಲ್ಲೂ ಉಡುಪುಗಳು ಲಭ್ಯ ಇವೆ.
ಎಂಡಿಐಎಸ್ ಅರ್ಜಿ ಆಹ್ವಾನ
ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಸಿಂಗಾಪುರ್ನಿಂದ(ಎಂಡಿಐಎಸ್) ಆರೋಗ್ಯ ಮತ್ತು ಜೈವಿಕ ವಿಜ್ಞಾನ ಶಾಲೆಯು ಅರ್ಹ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಂದ ಆರೋಗ್ಯ ವಿಜ್ಞಾನಗಳ ವಿಕಾಸಾತ್ಮಕ ತರಗತಿಗೆ ಅರ್ಜಿ ಆಹ್ವಾನಿಸಿದೆ. ಈ ಸ್ನಾತಕೋತ್ತರ 12 ತಿಂಗಳ ಕಾರ್ಯಕ್ರಮ. ಒಟ್ಟು 25 ಸೀಟು ಲಭ್ಯವಿದ್ದು, ಈ ಕೋರ್ಸ್ಗೆ ಪ್ರವೇಶ ಪಡೆಯಲು ಇಚ್ಛಿಸುವವರು ಆಂಗ್ಲಭಾಷೆಯಲ್ಲಿ ಪರಿಣಿತಿ ಹೊಂದಿರಬೇಕು. ಅರ್ಜಿ ಸಲ್ಲಿಸಲು 2014ರ ಆಗಸ್ಟ್ 20 ಕೊನೆ ದಿನ. ಅಕ್ಟೋಬರ್ 20ರಿಂದ ತರಗತಿ ಆರಂಭವಾಗುತ್ತವೆ. ತರಗತಿ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪ್ರಮಾಣ ಪತ್ರ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪತ್ರ ನೀಡಲಾಗುತ್ತದೆ. ಮಾಹಿತಿಗೆ 96634-20314 ಸಂಪರ್ಕಿಸಬಹುದು.
ನಾಕ್ಔಟ್ ವರ್ಷದ ಪ್ರಾಡಕ್ಟ್
ಎಸ್ಎಬಿ ಮಿಲ್ಲರ್ ಇಂಡಿಯಾ ಲಿಮಿಟೆಡ್ನ ಬಿಯರ್ ಬ್ರಾಂಡ್ ನಾಕ್ಔಟ್, ವರ್ಷದ ಪ್ರಾಡಕ್ಟ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಪೆಟ್ ಬಾಟಲ್ ಜೊತೆಗೆ ಸ್ಟ್ರಾಂಗ್ ಬಿಯರ್ ವಿಭಾಗದಲ್ಲಿ ಇದಕ್ಕೆ ಈ ಖ್ಯಾತಿ ಸಿಕ್ಕಿದೆ. ಈ ಅವಾರ್ಡ್ಗಾಗಿ ನೀಲ್ಸನ್ ಕಂಪನಿ ದೇಶಾದ್ಯಂತ ಸಮೀಕ್ಷೆ ನಡೆಸಿತ್ತು. ಮೆಗಾ ಮೆಟ್ರೊ ಸೇರಿದಂತೆ ಅನೇಕ ಪಟ್ಟಣಗಳನ್ನು ಆಯ್ಕೆ ಮಾಡಿಕೊಂಡು 5 ರಿಂದ 10 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲದೆ, ಸುಮಾರು 24 ಮಾರುಕಟ್ಟೆಗಳಿಂದ 18 ಸಾವಿರ ಜನರ ಪ್ರತಿಕ್ರಿಯೆ ಪಡೆದಿತ್ತು. ಇಲ್ಲಿ ಸಂಗ್ರಹಿಸಿದ ಅಭಿಪ್ರಾಯಗಳ ಪ್ರಕಾರ 2014 ವರ್ಷದ ಪ್ರಾಡಕ್ಟ್ ಆಗಿ ನಾಕ್ಔಟ್ ಆಯ್ಕೆ ಆಗಿದೆ. ಈ ಅವಾರ್ಡ್ ಘೋಷಣೆಯಿಂದ ಎಸ್ಎಬಿ ಮಿಲ್ಲರ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಖುಷಿಗೊಂಡಿದೆ. ತಮ್ಮ ಸಂಸ್ಥೆಗೆ ಈ ಅವಾರ್ಡ್ ಸಿಕ್ಕಿರುವುದು ಸಂತಸ ತಂದಿದೆ ಎಂದು ಎಸ್ಎಬಿ ಮಿಲ್ಲರ್ ಇಂಡಿಯಾ ಮಾರ್ಕೆಟಿಂಗ್ ಉಪಾಧ್ಯಕ್ಷ ದೀಪಕ್ನಾಥ್ ಪ್ರತಿಕ್ರಿಯಿಸಿದ್ದಾರೆ.
ಕಟ್ಟಡ ಸಾಮಗ್ರಿ ವಸ್ತು ಪ್ರದರ್ಶನ
ಎಸಿಆರ್ಇಎಕ್ಸ್ ಇಂಡಿಯಾ(ಆಕ್ರೆಕ್ಸ್) ಮತ್ತು ಬಿಲ್ಡಿಂಗ್ ಸರ್ವಿಸಸ್ ವಿಭಾಗದದಿಂದ ಅತ್ಯಾಧುನಿಕ ತಂತ್ರಜ್ಞಾನ ಉಪಕರಣಗಳ ಅಂತಾರಾಷ್ಟ್ರೀಯ ಪ್ರದರ್ಶನ ಸಿಲಿಕಾನ್ ಸಿಟಿಯಲ್ಲಿ ಆರಂಭವಾಗಿದೆ. ಎಸಿಆರ್ಇಎಕ್ಸ್ನ 16ನೇ ಪ್ರದರ್ಶನ ಇದಾಗಿದ್ದು, ಎಸಿಆರ್ಇಎಕ್ಸ್ ಇಂಡಿಯಾ 2015ರ ಅಧ್ಯಕ್ಷ ಮಾಧವರಾವ್ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ವಸ್ತು ಪ್ರದರ್ಶನ ದಕ್ಷಿಣ ಏಷ್ಯಾದಲ್ಲೇ ಏರ್ ಕಂಡಿಷನಿಂಗ್, ವೆಂಟಿಲೇಷನ್, ರೆಫ್ರಿಜರೇಷನ್ ಮತ್ತು ಬಿಲ್ಡಿಂಗ್ ಸರ್ವೀಸ್ ವಿಭಾಗದ ಯಂತ್ರೋಪಕರಣ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಅತಿದೊಡ್ಡ ವಸ್ತು ಪ್ರದರ್ಶನ ಎನಿಸಿಕೊಂಡಿದೆ ಎಂದರು.ಕಟ್ಟಡ ಸಾಮಗ್ರಿ ಬೇಕಿದ್ದಲ್ಲಿ 9036259062 ಸಂಪರ್ಕಿಸಬಹುದು.