ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

149ಕ್ಕೆ ಸಿಗುತ್ತೆ ಫುಲ್ ಚಿಕನ್

ಮ್ಯಾರಿ ಬ್ರೌನ್ ಲಾರ್ಡ್ ಆಫ್ ದಿ ವಿಂಗ್ಸ್ ವಿಶಿಷ್ಟ ಆಫರ್‌ಗಳನ್ನು ಪರಿಚಯಿಸುತ್ತಿದೆ.

Srinivasa Murthy VN
Updated On : 4 Aug 2014, 1:19 am

ಬೆಂಗಳೂರು: ಮ್ಯಾರಿ ಬ್ರೌನ್ ಲಾರ್ಡ್ ಆಫ್ ದಿ ವಿಂಗ್ಸ್ ವಿಶಿಷ್ಟ ಆಫರ್‌ಗಳನ್ನು ಪರಿಚಯಿಸುತ್ತಿದೆ.  ಇದರಲ್ಲಿ ಗ್ರಾಹಕರು ಕೇವಲ 149 ರೂಗಳಿಗೆ ಸ್ವಾದಿಷ್ಟವಾದ, ಅನಿಯಮಿತ ಚಿಕನ್‌ವಿಂಗ್ಸ್ ಸವಿಯಬಹುದು. ಲಾರ್ಡ್ ಆಫ್ ದಿ ವಿಂಗ್ಸ್‌ನ್ನು ಮನೆಯಲ್ಲೇ ಸವಿಯಬಹುದು. ಅದಕ್ಕಾಗಿ ನೀವು ಹೋಮ್ ಡೆಲಿವರಿ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ 350 ಕ್ಕೆ 20ವಿಂಗ್ಸ್ ಹೊಂದಿರುವ ಚಿಕನ್ ಟಬ್ ಅಥವಾ 555ಕ್ಕೆ 40ವಿಂಗ್ಸ್‌ನ್ನು ಆರ್ಡರ್ ಮಾಡಬಹುದು. ಹೋಮ್ ಡೆಲಿವರಿಗಾಗಿ 044-46218777, www.marrybrownindia.com

ಇಎಂಸಿ ಇಂಡಿಯಾಗೆ ಪ್ರಶಸ್ತಿ
ಇಎಂಸಿ ಇಂಡಿಯಾ ಸಿಒಇ 'ಡಿಸ್‌ಎಬಿಲಿಟಿ' ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇಎಂಸಿ ಈಬಾರಿ ತನ್ನ ಸದಸ್ಯತ್ವವನ್ನು ದ್ವಿಗುಣಗೊಳಿಸಿದೆ. ಹಾಗೂ ವಿಕಲಚೇತನರು, ಅಂಧರು, ಹೀಗೆ ಪ್ರತಿನಿತ್ಯ ಸಮಾಜಕ್ಕೆ ಸವಾಲಾಗಿ ಬದುಕುತ್ತಿರುವವರ ಏಳಿಗೆಗಾಗಿ ಶ್ರಮಿಸಿದ ಕಾರಣ ಪ್ರಶಸ್ತಿ ದೊರೆತಿದೆ. ಹಾಗೂ ವಿಕಲಚೇತನರಿಗೆ ಕೆಲಸ ದೊರಕಿಸುವಲ್ಲಿ ಕೂಡ ಯಶಸ್ವಿಯಾಗಿದೆ. ವಿಕಲಚೇತನರಿಗೆ ಸಹಕಾರ ನೀಡುತ್ತಾ ಬರುತ್ತಿದೆ.

ಆಕ್ಸ್‌ಫರ್ಡ್ ಪುಸ್ತಕ ಮಳಿಗೆಯಲ್ಲಿ ಸೌಂದರ್ಯವರ್ಧಕ
ಸಾವಯವ ಸೌಂದರ್ಯವರ್ಧಕ ಉತ್ಪನ್ನಗಳ ಸಂಸ್ಥೆ ಸೌಲ್ ಟ್ರೀ ತನ್ನ ವಹಿವಾಟನ್ನು ಆಕ್ಸ್‌ಫರ್ಡ್ ಪುಸ್ತಕ ಮಳಿಗೆಗೆ ವಿಸ್ತರಿಸಿದೆ. ಆಕ್ಸ್ ಫರ್ಡ್ ಮಳಿಗೆಯಲ್ಲಿ ಪುಸ್ತಕ ಪ್ರಿಯರಿಗೆ ಪುಸ್ತಕ ಕೊಳ್ಳುವುದರೊಂದಿಗೆ ಸಾವಯವ ಸೌಂದರ್ಯವರ್ಧಕ ಉತ್ಪನ್ನಗಳನ್ನು ಕೊಳ್ಳಲು ಸಹಾಯವಾಗಲಿದೆ. ಪುಸ್ತಕ ಮಳಿಗೆಯಲ್ಲಿ ಸೌಂದರ್ಯವರ್ಧಕಗಳ ಬಗ್ಗೆ ಮಾಹಿತಿ ಕೂಡ ದೊರೆಯುತ್ತದೆ. ಅಪಾಯಕಾರಿಯಾದ ರಾಸಾಯನಿಕಗಳಿಂದ ಮುಕ್ತವಾದ ಉತ್ಪನ್ನ ಬೆಲೆಯುವ ಬಗ್ಗೆ ಪ್ರಾಮಾಣಪತ್ರ ಪಡೆದ ರೈತರಿಂದ ಮಾತ್ರ ಸಂಸ್ಥೆ ಸಾವಯವ ಉತ್ಪನ್ನಗಳನ್ನು ಖರೀದಿಸುತ್ತದೆ. ಸಂಸ್ಥೆಯ ಉತ್ಪನ್ನಗಳಲ್ಲಿ ಬಳಸುವ ಬ್ರಾಹ್ಮಿಯಂತಹ ಕಚ್ಚಾವಸ್ತು, ನೆರಿಗೆ ಮುಕ್ತ ಚರ್ಮ ಹಾಗೂ ಹೊಳಪನ್ನು ನೀಡುತ್ತದೆ.

ಡಾಕ್‌ಟ್ರೀ ಇನ್‌ನಿಂದ ಹೊಸ ವ್ಯವಸ್ಥೆ
ವರ್ಚ್ಯೂಯಲ್ ಹಾಸ್ಪಿಟಲ್ ಪೋರ್ಟಲ್ ಡಾಕ್‌ಟ್ರೀ ಇನ್ ಈಗ ವೈದ್ಯಚಿಕಿತ್ಸೆಗಾಗಿ ಶೀಘ್ರ ಹಾಗೂ ಸುಲಭವಾಗಿ ಹಣಕಾಸಿನ ನೆರವನ್ನು ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ ವಿಶೇಷ ವೈದ್ಯ ಚಿಕಿತ್ಸೆಗಳನ್ನು ಪಡೆಯಲು ದೊಡ್ಡ ಮೊತ್ತದ ಹಣವನ್ನು ಮೀಸಲಿಡಬೇಕಾಗುತ್ತದೆ. ಪೋರ್ಟಲ್ ಮೂಲಕ ಗ್ರಾಹಕರು ಇನ್ನುಮುಂದೆ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಾಗ ಈ ರೀತಿಯ ದೊಡ್ಡ ಪ್ರಮಾಣದ ಚಿಕಿತ್ಸಾ ವೆಚ್ಚವನ್ನು ಭರಿಸಲು ಶೀಘ್ರ ಹಾಗೂ ಸುಲಭವಾದ ರೀತಿಯಲ್ಲಿ ಸಾಲದ ರಾಪದಲ್ಲಿ ಹಣವನ್ನು ಪಡೆಯಬಹುದು. ಭಾರತದಲ್ಲಿರುವ ಒಟ್ಟು ಜನಸಂಖ್ಯೆ ಪೈಕಿ ಶೇ.70ರಷ್ಟು ಜನ ವೈದ್ಯಕೀಯ ವಿಮೆ ಹೊಂದಿಲ್ಲ. ಇವರೆಲ್ಲರೂ ಬಹುತೇಕ ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ನಗದು ರೂಪದಲ್ಲಿ ರೂಪದಲ್ಲಿ ಪಾವತಿಸುತ್ತಾರೆ. ಕೆಲವು ಚಿಕಿತ್ಸೆಗಳು ದುಬಾರಿಯಾಗಿದ್ದು ಕೆಲವೊಮ್ಮೆ ಲಕ್ಷಾಂತರ ಹಣವನ್ನು ವ್ಯಯಿಸಬೇಕಾಗುತ್ತದೆ ಅಂತಹ ಸಮಯದಲ್ಲಿ ಈ ವ್ಯವಸ್ಥೆ ಉಪಯೋಗಕಾರಿ.

ಜಯಂಟ್‌ನಿಂದ ಎರಡನೇ ಕೇಂದ್ರ ಆರಂಭ
ಜಯಂಟ್ ತನ್ನ ಎರಡನೇ ಕೇಂದ್ರವನ್ನು ನಗರದ ಇಂದಿರಾನಗರದಲ್ಲಿ ತೆರೆದಿದೆ. ಪ್ರೊಪೆಲ್ ಅಡ್ವಾನ್ಸ್‌ಡ್ ಎಸ್‌ಎಲ್‌ಓ ಬೈಕ್‌ನ್ನು ಭಾರತದಲ್ಲಿ ಪ್ರಥಮ ಬಾರಿಗೆ ಅನಾವರಣಗೊಳಿಸಿದೆ. ಉತ್ಕೃಷ್ಟ ಸೈಕಲ್ ಹಾಗೂ ಬೈಕ್ ಉಪಸಾಧನಗಳ ಬ್ರಾಯಂಡ್ ಜಯಂಟ್ ಸ್ಟಾರ್ಕೆನ್ ಸೈಕ್ಲಿಂಗ್‌ವರ್ಲ್ಡ್‌ನ್ನು ಪ್ರಾರಂಭಿಸಿದೆ. ಜಯಂಟ್ ಕಂಪನಿಯಲ್ಲಿ ಬೈಕ್ ಸಿಮ್ಯುಲೇಟರ್, ಬೈಕ್ ಸ್ಪಾ, ಬೈಕ್ ಫಿಟ್, ಬೈಕ್ ಲೈಬ್ರರಿ, ಬೈಕ್ ಕೆಫೆ ಹಾಗೂ ವ್ಯಾಪಕ ಶ್ರೇಣಿಯ ಬೈಕ್‌ನ ಪ್ರದರ್ಶನ ಕೂಡ ಏರ್ಪಡಿಸಿತ್ತು. ಎಸ್‌ಎಲ್‌ಓ ಬೈಕ್ ಅತ್ಯಂತ ವೇಗದ ಬೈಕ್ ಎಂದು ಗುರುತಿಸಲಾಗಿದೆ. ಈ ಬೈಕನ್ನು ಎಂಟು ಸ್ಪರ್ಧೆಗಳಲ್ಲಿ ಮೂರನ್ನು ಗೆದ್ದಿರುವ ಚಾಂಪಿಯನ್ ಬೈಕರ್ ಮಾರ್ಸೆಲ್  ಕಿಟೆಲ್ ಸೇರಿದಂತೆ ಟೂರ್ ಡಿ ಫ್ರ್ಯಾನ್ಸ್‌ನಲ್ಲಿ ಜಯಂಟ್ ಶಿಮಾನೋ ತಂಡದಿಂದ ಬೈಕ್ ಉಪಯೋಗಿಸಲ್ಪಟ್ಟಿದೆ. ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಯಲ್ಲಿ ಎರಡು ಬಾರಿ 4ನೇ ಸ್ಥಾನಗಳಿಸಿದೆ.

ವೃತ್ತಿಪರರಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಕ್ರಮ
ಮಣಿಪಾಲ್ ಗ್ಲೋಬಲ್ ಎಜುಕೇಶನ್ ಹಾಗೂ ಗೂಗಲ್ ಇಂಡಿಯಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಕ್ರಮ ಪ್ರಾರಂಭಿಸಿದೆ. ಮೂರು ತಿಂಗಳ ಕಾರ್ಯಕ್ರಮ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತರಬೇತುಗೊಂಡ ವೃತ್ತಿಪರರ ಹೆಚ್ಚುತ್ತಿರುವ ಅಗತ್ಯವನ್ನು ಈಡೇರಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮ ಕ್ಲಾಸ್‌ರೂಂ ಸೆಶನ್‌ಗಳು, ಇ ಲರ್ನಿಂಗ್ ಹಾಗೂ ಪ್ರತ್ಯಕ್ಷ ಪ್ರಾಜೆಕ್ಟ್‌ಗಳ ಮೂಲಕ ನೇರ ಕಲಿಕೆಯಾಗಿದೆ. ವಿಶ್ವದರ್ಜೆ ತರಬೇತಿ ಅನುಭವಕ್ಕಾಗಿ ಮಣಿಪಾಲ್ ಗ್ಲೋಬಲ್‌ಗೆ ಗೂಗಲ್ ಇಂಡಿಯಾ ತನ್ನ ಅತ್ಯಾಧುನಿಕ ತರಬೇತಿ ಪಠ್ಯಕ್ರಮ ಹಾಗೂ ಸರ್ಟಿಫಿಕೇಶನ್ ಗುಣಮಟ್ಟವನ್ನು ಒದಗಿಸುತ್ತದೆ. ತರಗತಿ ಆಗಸ್ಟ್‌ನಿಂದ ಪ್ರಾರಂಭವಾಗಿದೆ.

ಮುಖೇಶ್ ಬಾತ್ರಾಗೆ ಪ್ರಶಸ್ತಿ
ಹೋಮಿಯೋಪತಿ ವೈದ್ಯ ಮುಖೇಶ್ ಬಾತ್ರಾ ಅವರಿಗೆ ನೆಟ್‌ವರ್ಕ್ 7 ಮಾಧ್ಯಮ ಸಮೂಹದಿಂದ ವರ್ಷದ ಭಾರತೀಯ ಪ್ರಶಸ್ತಿಯನ್ನು ನೀಡಿದೆ. ಆರೋಗ್ಯ ಆರೈಕೆ, ಔಷಧೀಯ ಕ್ಷೇತ್ರದಲ್ಲಿ ನಾಯಕತ್ವ ಹಾಗೂ ಕೊಡುಗೆಗಾಗಿ ಭಾರತೀಯ ಪ್ರಶಸ್ತಿಯನ್ನು ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement