ಆರ್ ಬಿಐ 
ವಾಣಿಜ್ಯ

ಆರ್‍ಬಿಐ ಸಾಲ ನೀತಿ ಘೋಷಣೆ ಟ್ವಿಟರಲ್ಲಿ?

ಟ್ವಿಟರ್ ಮತ್ತು ಫೇಸ್‍ಬುಕ್ ಅನ್ನು ಬಳಸದವರೇ ಇಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಟ್ವಿಟರ್ ಮೂಲಕ ತನ್ನ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಸಾಧ್ಯತೆ ಅಧಿಕವಾಗಿದೆ.

ಮುಂಬೈ: ಟ್ವಿಟರ್ ಮತ್ತು ಫೇಸ್‍ಬುಕ್ ಅನ್ನು ಬಳಸದವರೇ ಇಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಟ್ವಿಟರ್ ಮೂಲಕ ತನ್ನ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಸಾಧ್ಯತೆ ಅಧಿಕವಾಗಿದೆ.

ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‍ನಲ್ಲಿ ಆರ್ ಬಿಐ ಖಾತೆ ತೆರೆದಿದೆ. @rbi_official ಎಂಬ ಹ್ಯಾಂಡಲ್‍ನಲ್ಲಿ ವರಿಷ್ಠ ಬ್ಯಾಂಕ್‍ನ ಎಲ್ಲ ಘೋಷಣೆಗಳೂ ಸಿಗಲಿದೆ. ಇಷ್ಟು ಮಾತ್ರವಲ್ಲ ಮುಂದಿನ ತ್ರೈಮಾಸಿಕ ಸಭೆಯ ಬಳಿಕ ಸಾಲ ಪರಿಷ್ಕರಣಾ ನೀತಿಯ ಘೋಷಣೆ ಮಾಡಲಿದೆಯಂತೆ. ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ರಂಗದ ಬ್ಯಾಂಕ್‍ಗಳು ಫೇಸ್ ಬುಕ್ ಮತ್ತು ಟ್ವಿಟರ್ ಅನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿವೆ.

ಹೀಗಾಗಿ, ಆರ್‍ಬಿಐ ಕೂಡ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಮುಂದಾಗಿದೆ. ಇಷ್ಟು ಮಾತ್ರವಲ್ಲದೆ ಆರ್‍ಬಿಐನ ಪ್ರಮುಖ ಸಭೆಗಳು, ನಿರ್ಧಾರಗಳನ್ನು ಪ್ರಕಟಿಸುವ ಸುದ್ದಿಗೋಷ್ಠಿಗಳು, ಸಂದರ್ಶನಗಳನ್ನು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಎಲ್ಲ ಪ್ರಚಾರ ವಿಚಾರಗಳನ್ನು ಯೂಟ್ಯೂಬ್‍ಗೆ ಅಪ್ ಲೋಡ್ ಮಾಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ayodhya: ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಆರೋಪಿಗಳ ವಿರುದ್ಧ FIR ದಾಖಲು!

Women T-20 World cup: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಗೆಲುವು!

ಸೇಡಿಗಾಗಿ ಖಾಸಗಿ ಪೋಟೋ, ವಿಡಿಯೋ ವೈರಲ್, ಬೆದರಿಕೆ ಪ್ರಕರಣ: ಕಡ್ಡಾಯವಾಗಿ FIR ದಾಖಲಿಸಬೇಕು, ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ!

Bidadi Township Project: ಸಿಎಂ ಡಿಕೆ ಶಿವಕುಮಾರ್‌ಗೆ 2ನೇ ಪತ್ರ ಬರೆದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ!

ಗರಿಷ್ಠ ಅವಧಿ ಸಂಪೂರ್ಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಅನರ್ಹ, BCCI ಒಂಬುಡ್ಸ್‌ಮನ್ ಆದೇಶ!