ನವದೆಹಲಿ: ಸೋಮವಾರದ ವಹಿವಾಟು ಮುಕ್ತಾಯಕ್ಕೆ ಸೆನ್ಸೆಕ್ಸ್ 105 ಅಂಕಗಳ ಕುಸಿತ ಕಂಡು 25 ಸಾವಿರದ 532ರಲ್ಲಿ ವಹಿವಾಟು ಮುಕ್ತಾಯಗೊಂಡಿದೆ.ನಿಫ್ಟಿ 17 ಅಂಕಗಳ ಕುಸಿತ ಕಂಡುಬಂದು 7 ಸಾವಿರದ 765ರಲ್ಲಿ ಸೂಚ್ಯಂಕ ನಿಂತಿದೆ.
ಆದರೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಇಂದು ಷೇರುಗಳು ಉತ್ತಮವಾಗಿ ವಹಿವಾಟು ನಡೆಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆಯಾಗಿ ಡಾಲರ್ ವೊಂದರ ಬೆಲೆ 66 ರೂಪಾಯಿ 62 ಪೈಸೆಯಷ್ಟಾಗಿದೆ.
ಆದರೆ ಇಂದು ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ 108 ಅಂಕಗಳ ಏರಿಕೆ ಕಂಡುಬಂದು, ನಿಫ್ಟಿ 35 ಅಂಕಗಳಷ್ಟು ಹೆಚ್ಚಾಗಿದೆ.