ಶ್ರೀ ಸಿದ್ಧಿವಿನಾಯಕ ದೇವಾಲಯ 
ವಾಣಿಜ್ಯ

ಜಿಎಂಎಸ್ ಯೋಜನೆ: ಮುಂಬೈ ನ ಸಿದ್ಧಿವಿನಾಯಕ ದೇವಾಲಯದಿಂದ 40 ಕೆಜಿ ಚಿನ್ನ ಠೇವಣಿ

ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಚಿನ್ನ ನಗದೀಕರಣ ಯೋಜನೆ (ಜಿಎಂಎಸ್) ಯಲ್ಲಿ ಮುಂಬೈ ನ ಶ್ರೀ ಸಿದ್ಧಿವಿನಾಯಕ ದೇವಾಲಯ 40 ಕೆಜಿ ಚಿನ್ನ ಠೇವಣಿ ಮಾಡಲಿದೆ.

ಮುಂಬೈ: ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಚಿನ್ನ ನಗದೀಕರಣ ಯೋಜನೆ (ಜಿಎಂಎಸ್) ಯಲ್ಲಿ ಮುಂಬೈ ನ ಶ್ರೀ ಸಿದ್ಧಿವಿನಾಯಕ ದೇವಾಲಯ 40 ಕೆಜಿ ಚಿನ್ನ ಠೇವಣಿ ಮಾಡಲಿದೆ.
ಚಿನ್ನದ ನಗದೀಕರಣ ಯೋಜನೆಯಲ್ಲಿ ಠೇವಣಿ ಮಾಡುವುದರಿಂದ ದೇವಾಲಯಕ್ಕೆ ವಾರ್ಷಿಕವಾಗಿ 67 ಲಕ್ಷ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಶೀ ಸಿದ್ಧಿವಿನಾಯಕ ದೇವಾಲಯ ಭಕ್ತಾದಿಗಳು ದೇಣಿಗೆ ನೀಡಿರುವ ಚಿನ್ನದ ಆಭರಣಗಳನ್ನು ಹರಾಜು ಹಾಕಿ ಲಾಭ ಗಳಿಸುತ್ತಿತ್ತು.
ಶ್ರೀ ಸಿದ್ಧಿವಿನಾಯಕ ದೇವಾಲಯ ಸುಮಾರು 160 ಕೆಜಿ ಚಿನ್ನ ಹೊಂದಿದೆ. ಕೇರಳದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ  20 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಇದ್ದು, ದೇವಾಲಯದ ಆಸ್ತಿಗೆ ಸಂಬಧಿಸಿದಂತೆ ವಿಚಾರಣೆ ನಡೆಯುತ್ತಿರುವುದರಿಂದ ಪ್ರಧಾನಿ ಮೋದಿ ಅವರ ಜಿಎಂಎಸ್ ಯೋಜನೆಯಲ್ಲಿ ಠೇವಣಿ ಮಾಡಲು ಸಾಧ್ಯವಿರುವುದಿಲ್ಲ. ಜಿಎಂಎಸ್ ಯೋಜನೆಯಡಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಂದು ಕೆಜಿ ಚಿನ್ನ ಠೇವಣಿಯಾಗಿದ್ದು ಪ್ರಧಾನಿ ಮೋದಿ ಅವರ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

ಅಚ್ಚರಿ: ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಪಾಕಿಸ್ತಾನದ ಪ್ರದೇಶಗಳಿಗೆ ಹಿಂದೂ ಹೆಸರು ಮರು ನಾಮಕರಣ, ಏನಾಗ್ತಿದೆ ಲಾಹೋರ್ ನಲ್ಲಿ?

ನಾಳೆ ರಾಜ್ಯಾದ್ಯಂತ ಮೆಡಿಕಲ್ ಶಾಪ್​ಗಳು ಬಂದ್; ಅಗತ್ಯ ಔಷಧಿಗಳನ್ನು ಇಂದೇ ಖರೀದಿಸಿ

ಲಂಕಾ ವಿರುದ್ಧ ಏಕದಿನ, ಟೆಸ್ಟ್​ ತಂಡ ಪ್ರಕಟ: ರಿಷಭ್ ಪಂತ್‌ಗೆ ಕೊಕ್; ಕನ್ನಡಿಗ ಕೆಎಲ್ ರಾಹುಲ್ ಉಪನಾಯಕ

NEET ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತ ಆರೋಪಿಗಳ ಕೋಚಿಂಗ್ ಸೆಂಟರ್ ಕಟ್ಟಡಗಳನ್ನು ಕೆಡವಿ; ಮಹಾ ಸಚಿವ ಆಗ್ರಹ

SCROLL FOR NEXT