ಭಾರತೀಯ ಕೈಗಾರಿಕೆಗಳ ಒಕ್ಕೂಟ ಹಮ್ಮಿಕೊಂಡ ಸಮ್ಮೇಳನದ ಸಂದರ್ಭದಲ್ಲಿ ಮಾಧ್ಯಮಕ್ಕೆ ಎದುರಾದ ಕೇಂದ್ರ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅಮಿತಾಬ್ ಕಾಂತ್ ಅವರೊಂದಿಗೆ ಸಿಐಐ ಕರ್ನಾಟಕದ ಅಧ್ಯಕ 
ವಾಣಿಜ್ಯ

ವಿದೇಶಿ ಬಂಡವಾಳ ಹರಿವು ಏರಿಕೆ: ಅಮಿತಾಭ್ ಕಾಂತ್

ಜಗತ್ತಿನಲ್ಲಿ ವಿದೇಶ ಬಂಡವಾಳ ಹೂಡಿಕೆ ಪ್ರಮಾಣ ಶೇ.16ರಷ್ಟು ಕುಸಿದಿರುವ ಸಂದರ್ಭದಲ್ಲಿಯೇ ಭಾರತದಲ್ಲಿ...

ಬೆಂಗಳೂರು: ಜಗತ್ತಿನಲ್ಲಿ ವಿದೇಶ ಬಂಡವಾಳ ಹೂಡಿಕೆ ಪ್ರಮಾಣ ಶೇ.16ರಷ್ಟು ಕುಸಿದಿರುವ ಸಂದರ್ಭದಲ್ಲಿಯೇ ಭಾರತದಲ್ಲಿ ಶೇ.35ರಷ್ಟು ಪ್ರಗತಿ ಕಂಡಿದೆ ಎಂದು ಕೇಂದ್ರ  ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಮಿತಾಬ್ ಕಾಂತ್ ತಿಳಿಸಿದ್ದಾರೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ ಮಂಗಳವಾರ ಹಮ್ಮಿಕೊಂಡ ಸಮ್ಮೇಳನದ  ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ ಶೇ.49ರಷ್ಟು, ರೈಲ್ವೆ,  ವೈದ್ಯಕೀಯ, ಮೂಲ ಸೌಕರ್ಯ ಸೇರಿದಂತೆ 15 ಕ್ಷೇತ್ರಗಳಿಗೆ  ವಿದೇಶಿ ನೇರ ಬಂಡವಾಳ  ಹೂಡಿಕೆಯಾಗಿದೆ ಎಂದು ಅಂಕಿಅಂಶದೊಂದಿಗೆ ವಿವರಿಸಿದರು.

ಕಳೆದ ಸೆಪ್ಟೆಂಬರ್‍ನಲ್ಲಿ ಮೇಕ್‍ಇನ್ ಇಂಡಿಯಾ ಪರಿಕಲ್ಪನೆಗೆ ಪ್ರಧಾನಿ ಚಾಲನೆ ನೀಡಿದರು.  ಆದುದರಿಂದ ಕಳೆದ ಆರ್ಥಿಕ ವರ್ಷದಲ್ಲಿ ಶೇ.40ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ   ಏರಿಕೆಯಾಗಿದೆ ಎಂದು ಅಧ್ಯಯನ ವರದಿಯನ್ನು ಪ್ರಸ್ತಾಪಿಸಿದರು.  ಮೇಕ್‍ಇನ್ ಇಂಡಿಯಾ ಪರಿಕಲ್ಪನೆ ಮೂಲಕ  ಸ್ಟಾರ್ಟ್‍ಅಪ್‍ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭಾರತ ಉದ್ಯೋಗ  ಸೃಷ್ಟಿಸುವ ದೇಶವಾಗಬೇಕು, ಉದ್ಯೋಗವನ್ನು ಬಯಸುವ ದೇಶವಾಗಬಾರದು. ಹೀಗಾಗಿಯೇ   ಸ್ಟಾರ್ಟ್‍ಅಪ್ ಆಂದೋಲನಕ್ಕೆ ಪ್ರಧಾನಿ ಯೋಜನೆ ರೂಪಿಸಿದ್ದು, ಭಾರತ ಸಶಕ್ತವಾಗುವ ವಿಶ್ವಾಸವಿದೆ ಎಂದು ಕಾಂತ್ ಅಭಿಪ್ರಾಯಪಟ್ಟರು.

ದೇಶದ ಪ್ರಗತಿಯನ್ನು ಈ ಬಾರಿ 340 ಅಂಶಗಳ ಮೇಲೆ ಅಳೆಯಲಾಗುತ್ತಿದೆ. ಇದರಲ್ಲಿ  ಕರ್ನಾಟಕ ಮೊದಲ ಮೂರರೊಳಗೆ ಸ್ಥಾನ ಪಡೆಯುವ ಅವಕಾಶವಿದೆ ಎಂದರು. ಕಳೆದ ವರ್ಷ  ನೂರು ಅಂಶಗಳ  ಮೇಲೆ ರ್ಯಾಂಕ್ ನೀಡಲಾಗಿತ್ತು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT