ಸಾಂದರ್ಭಿಕ ಚಿತ್ರ 
ವಾಣಿಜ್ಯ

ಅನಿಲ ದರ ಇಳಿಸಿದ ಕತಾರ್

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕತಾರ್ ಸಹ ಅನಿಲ ದರಗಳನ್ನು...

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕತಾರ್ ಸಹ ಅನಿಲ ದರಗಳನ್ನು ಕಡಿಮೆ ಮಾಡ ಬೇಕೆಂಬ ಭಾರತದ ಒತ್ತಾಯಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದರೊಂದಿಗೆ ಕತಾರ್ ಭಾರತಕ್ಕೆ ಹೊಸ ವರ್ಷದ ಕೊಡುಗೆ ನೀಡಿದೆ. 
ಭಾರತಕ್ಕೆ ಸರಬರಾಜು ಮಾಡುವ ಅನಿಲದಲ್ಲಿ ದೀರ್ಘಾವಧಿ ಒಪ್ಪಂದದಲ್ಲಿನ ದರವನ್ನು 600 ಕೋಟಿ ಡಾಲರ್‍ನಷ್ಟು ಕಡಿಮೆ ಮಾಡಿದೆ. ಇದೇ ಸಂದರ್ಭದಲ್ಲಿ ಕಳೆದ ವರ್ಷ ಒಪ್ಪಂದಕ್ಕಿಂತಲೂ ಕಡಿಮೆ ಆಮದು ಮಾಡಿಕೊಂಡಿದ್ದಕ್ಕೆ ವಿಧಿಸಿದ್ದ ರು.12,000 ಕೋಟಿ ದಂಡವನ್ನು ರದ್ದುಗೊಳಿಸಿದೆ. 
ಭಾರತದ ಅತಿದೊಡ್ಡ ಸಾಂದ್ರೀಕೃತ ನೈಸರ್ಗಿಕ ಅನಿಲ ಕಂಪನಿ ಪೆಟ್ರೋನೆಟ್ ಎಲ್‍ಎನ್‍ಜಿ ಲಿ.(ಪಿಎಲ್ಎಲ್) ಕತಾರ್‍ನ ರಾಸ್‍ಗ್ಯಾಸ್ ಕಂಪನಿ ಜೊತೆಗೆ ಪರಿಷ್ಕೃತ ಒಪ್ಪಂದಕ್ಕೆ ಸಹಿ ಮಾಡಿದೆ. ಹೊಸ ಒಪ್ಪಂದದಂತೆ ಪ್ರತಿ ಎಂಬಿಟಿಯು ದರ 6ರಿಂದ 7 ಲರ್‍ಗೆ ಇಳಿಯಲಿದೆ.
ಸದ್ಯ ಈ ದರ 12ರಿಂದ 13 ಡಾಲರ್ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಹೊಸ ಒಪ್ಪಂದಂತೆ ರಾಸ್‍ಗ್ಯಾಸ್‍ನಿಂದ ಭಾರತ ವರ್ಷವೊಂದಕ್ಕೆ ಆಮದು ಮಾಡಿಕೊಳ್ಳುವ ಒಟ್ಟಾರೆ ಅನಿಲದ ಪೈಕಿ 7.5 ದಶಲಕ್ಷ ಎಂಬಿಟಿಯು ಅನಿಲಕ್ಕೆ ಹೊಸ ದರಗಳು ಅನ್ವಯವಾಗಲಿವೆ. 
ಹೊಸ ಒಪ್ಪಂದದ ಅವಧಿ 2028ರ ಏಪ್ರಿಲ್‍ವರೆಗೆ ಇದೆ. ಬ್ರೆಂಟ್ ಕಚ್ಚಾ ತೈಲದ ಮೂರು ತಿಂಗಳ ದರಗಳ ಸರಾಸರಿ ಆಧಾರದಲ್ಲಿ ಪರಿಷ್ಕೃತ ಸೂತ್ರವನ್ನು ರೂಪಿಸಲಾಗಿದೆ. 
ಹೊಸ ಒಪ್ಪಂದದಿಂದ ಭಾರತಕ್ಕೆ ಮೂರು ವರ್ಷಗಳ ಅವಧಿಯಲ್ಲಿ 250 ಕೋಟಿ ಡಾಲರ್ ಉಳಿತಾಯ ವಾಗಲಿದೆ. 
ಭಾರತ ತನಗೆ ಅಗತ್ಯವಿರುವ ಒಟ್ಟಾರೆ ಕಚ್ಚಾ ತೈಲ ಪೈಕಿ ಶೇ.80ರಷ್ಟು ಆಮದು ಮಾಡಿಕೊಳ್ಳಲಿದೆ. ದೇಶದ ವಿದೇಶಿ ವಿನಿಮಯದಲ್ಲಿ ಕಚ್ಚಾ ತೈಲದ್ದೇ ಅಗ್ರಸ್ಥಾನ. ಇದು ದೇಶದ ಚಾಲ್ತಿ ಖಾತೆ ಕೊರತೆ ಮೇಲೆ ಪರಿಣಾಮ ಬೀರುತ್ತದೆ. 
ಕಳೆದೆರಡು ವರ್ಷಗಳಿಂದ ಜಾಗತಿಕ ಆರ್ಥಿಕತೆ ಯಲ್ಲಿ ಹಿಂಜರಿತ ಕಾಣುತ್ತಿರುವುದರಿಂದ ಕಚ್ಚಾ ತೈಲಕ್ಕೆ ಬೇಡಿಕೆ ಕುಸಿದಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಹನ್ನೊಂದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT