ವಾಣಿಜ್ಯ

೮ ಹೆಚ್ಚುವರಿ ವಿಮಾನಗಳನ್ನು ಹೊಂದಲಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್

Guruprasad Narayana

ಸಿಂಗಪೋರ್: ಏರ್ ಇಂಡಿಯಾದ ಕಡಿಮೆ ಬಜೆಟ್ ವಿಮಾನಯಾನ ಘಟಕ ಏರ್ ಇಂಡಿಯಾ ಎಕ್ಸ್ಪ್ರೆಸ್ ೨೦೧೬-೧೭ ನೆ ಸಾಲಿಗೆ ೮ ಹೊಸ ವಿಮಾನಗಳನ್ನು ಲೀಸ್ ಗೆ ತೆಗೆದುಕೊಳ್ಳಲಿದೆ. ಇದರಿಂದ ಈ ಸಂಸ್ಥೆಯ ವಿಮಾನಗಳ ಸಂಖ್ಯೆ ೨೫ಕ್ಕೆ ಏರಲಿದ್ದು ಹೊಸ ಮಾರ್ಗಗಳನ್ನು ಕೂಡ ಹಾರಾಟಕ್ಕೆ ಸೇರಿಸಿಕೊಳ್ಳಲಿದೆ.

"ಈಗಾಗಲೇ ೩ ಲೀಸ್ ಗಳಿಗೆ ಸಹಿ ಹಾಕಿದ್ದೇವೆ ಇನ್ನೈದು ಲೀಸ್ ಗಳು ಕಾರ್ಯಪ್ರಗತಿಯಲ್ಲಿವೆ. ಲೀಸಿಂಗ್ ಸಂಸ್ಥೆಗಳಿಂದ ಹೊಸ ವಿಮಾನಗಳನ್ನು ಲೀಸ್ ಗೆ ಪಡೆಯುತ್ತಿದ್ದೇವೆ" ಎಂದಿದ್ದಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಶ್ಯಾಮ್ ಸುಂದರ್.

"ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಅನುಮತಿ ನೀಡಿರುವಂತೆ ಇನ್ನು ೧೧ ವಿಮಾನಗಳನ್ನು ಲೀಸ್ ಗೆ ತೆಗೆದುಕೊಂಡು ಒಟ್ಟಿನ ಸಂಖ್ಯೆಯನ್ನು ೨೬ಕ್ಕೆ ಏರಿಸಿಕೊಳ್ಳಲಿದ್ದೇವೆ" ಎಂದಿದ್ದಾರೆ.

'ಬಿ೭೩೭ ೮೦೦ ಎನ್ ಜಿ' ೧೮೯ ಆಸನಗಳ ಹೊಸ ಮಿತವ್ಯಯ ವಿಭಾಗದ ವಿಮಾನವನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಪರಿಚಯಿಸಲಿದೆ.

SCROLL FOR NEXT