ಮುಂಬೈ: ಕಾರು ಖರೀದಿಸಲಿಚ್ಛಿಸುತ್ತಿರುವ ಮಹಿಳಾ ಖರೀದಿದಾರರಿಗೆ ಒಂದು ಶುಭ ಸುದ್ದಿ. ಎಸ್‍ಬಿಐಯು `ಹರ್ ಘರ್ ಹರ್ ಕಾರ್' ಯೋಜನೆಯಡಿಯಲ್ಲಿ ಮಹಿಳಾ ಗ್ರಾಹಕರಿಗೆ ಕಾರ್ ಲೋನ್ ಮೇಲಿನ ಬಡ್ಡಿದರದಲ್ಲಿ ವಾರ್ಷಿಕವಾಗಿ ಶೇ.0.25ರಷ್ಟು ಕಡಿತಗೊಳಿಸಲಿದೆ.
ಈ ಯೋಜನೆಯಿಂದ ಲೋನ್ ನ ಬಡ್ಡಿದರದಲ್ಲಿ ವಾರ್ಷಿಕವಾಗಿ ಶೇ.10 ಇಳಿಕೆಯಾಗಲಿದೆ. ಕಳೆದ ಏಪ್ರಿಲ್‍ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ `ಹರ್ ಘರ್' ಯೋಜನೆ ಅನ್ವಯ ಮನೆ ಲೋನ್ ತೆಗೆದುಕೊಳ್ಳುವ ಮಹಿಳಾ ಗ್ರಾಹಕರಿಗೆ ಬಡ್ಡಿದರದಲ್ಲಿ ಶೇ.0.25 ಕಡಿಮೆ ಮಾಡಿತ್ತು. ಅಲ್ಲದೇ, ಎಸ್‍ಬಿಐ ಎಮ್ ಕ್ಯಾಷ್ ಎಂ ಯೋಜನೆಯನ್ನು ಆರಂಭಿಸಿದೆ. ಗ್ರಾಹಕರು ಬ್ಯಾಂಕ್ ಖಾತೆ ಮಾಹಿತಿಗಳ ಅವಶ್ಯಕತೆಯಿಲ್ಲದೆ ಹಣ ವರ್ಗಾಯಿಸಬಹುದು.