ವಾಣಿಜ್ಯ

ಚಿನ್ನದ ಬೆಲೆ ಏರಿಕೆ

Srinivasamurthy VN

ನವದೆಹಲಿ: ಜಾಗತಿಕ ಮಟ್ಟದಲ್ಲಿ ಬಂಗಾರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸತತ 3ನೇ ದಿನ ಚಿನ್ನದ ಧಾರಣೆಯಲ್ಲಿ 100 ರುಪಾಯಿಯಷ್ಟು ಏರಿಕೆ ಕಂಡು ಬಂದಿತು.

ಬುಧವಾರದ ಚಿನಿವಾರ ಪೇಟೆಯ ವಹಿವಾಟು ಮುಕ್ತಾಯದ ವೇಳೆಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 27,150 ರು.ನಷ್ಟು ದಾಖಲಾಯಿತು. ಬೆಳ್ಳಿ ಧಾರಣೆ ಕೂಡ 500 ರು.ನಷ್ಟು ಏರಿಕೆ ಕಂಡು ಪ್ರತಿ ಕೆಜಿಗೆ 37,800 ರೂ.ಗಳಿಗೆ ವಹಿವಾಟು ಅಂತ್ಯ ಕಂಡಿತು.

ಅಮೆರಿಕದ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಅಮೆರಿಕ ಫೆಡರಲ್ ಬ್ಯಾಂಕುಗಳು ತಮ್ಮ ಬಡ್ಡಿ ದರವನ್ನು ಏರಿಕೆ ಮಾಡುವ ಮುನ್ಸೂಚನೆ ನೀಡಿವೆ. ಹೀಗಾಗಿ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಜಾಗತಿಕ ಮಟ್ಟದಲ್ಲಿ ಚಿನ್ನದ ಖರೀದಿ ಪ್ರಮಾಣ ಏರಿಕೆಯಾದ ಹಿನ್ನಲೆಯಲ್ಲಿ ಸತತ 3ನೇ ದಿನವೂ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ.

SCROLL FOR NEXT