ಸೆನ್ಸೆಕ್ಸ್ 
ವಾಣಿಜ್ಯ

ಚೇತರಿಕೆ ಕಂಡ ಷೇರುಪೇಟೆ

ಸತತವಾಗಿ ಇಳಿಕೆಯತ್ತ ಸಾಗುತ್ತಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಚೇತರಿಕೆ ಕಂಡಿದ್ದು, ದಿನದಂತ್ಯಕ್ಕೆ ಸೆನ್ಸೆಕ್ಸ್ 450 ಅಂಕಗಳ ಏರಿಕೆ ಕಂಡಿದೆ...

ಮುಂಬೈ: ಸತತವಾಗಿ ಇಳಿಕೆಯತ್ತ ಸಾಗುತ್ತಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಚೇತರಿಕೆ ಕಂಡಿದ್ದು, ದಿನದಂತ್ಯಕ್ಕೆ ಸೆನ್ಸೆಕ್ಸ್ 450 ಅಂಕಗಳ ಏರಿಕೆ ಕಂಡಿದೆ.

ಕಳೆದವಾರವಷ್ಟೇ ಭಾರಿ ಇಳಿಕೆ ಕಂಡಿದ್ದ ಸೆನ್ಸೆಕ್ಸ್ ಮತ್ತೆ ಚೇತರಿಕೆಯತ್ತ ಮುಖಮಾಡಿದ್ದು, ಬುಧವಾರದ ದಿನದಂತ್ಯಕ್ಕೆ ಸೆನ್ಸೆಕ್ಸ್ ಶೇ.1.36ರಷ್ಟು ಏರಿಕೆ ಕಂಡಿದೆ. ಸೆನ್ಸೆಕ್ಸ್ ಒಟ್ಟು 359.25 ಅಂಕಗಳ ಏರಿಕೆ ಕಂಡಿದ್ದು, ಅಂಕಗಳ ಗಳಿಕೆಯನ್ನು 26840 ಏರಿಕೆ ಮಾಡಿಕೊಂಡಿದೆ. ನಿಫ್ಟಿಯಲ್ಲಿ ಕೂಡ ಅಲ್ಪ ಏರಿಕೆ ಕಂಡುಬಂದಿದ್ದು, ನಿಫ್ಟಿ 102.5 ಅಂಕಗಳ ಏರಿಕೆಯೊಂದಿಗೆ 8,100 ಅಂಕಗಳಿಗೆ ಏರಿಕೆಯಾಗಿದೆ.

ಇನ್ನು ಖ್ಯಾತ ಷೇರು ಸಂಸ್ಥೆಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಲ್ ಅಂಡ್ ಟಿ ಮತ್ತು ಹೆಡ್ ಎಫ್ ಸಿ ಬ್ಯಾಂಕುಗಳ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಇದಲ್ಲದೆ ಗ್ರಾಹಕ ಬಳಕೆ ವಸ್ತುಗಳು, ಬ್ಯಾಂಕಿಂಗ್ ಕ್ಷೇತ್ರ, ಇಂಧನ ಕ್ಷೇತ್ರ ಮತ್ತು  ರಿಯಾಲ್ಟಿ ಕ್ಷೇತ್ರಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾದ ಎ ಷೇರುಗಳ ಲಾಭ ಭಾರತೀಯ ಮಾರುಕಟ್ಟೆ ಪಡೆದಿದ್ದು, ಇದರ ಪರಿಣಾಮವಾಗಿಯೇ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಂಡಿದೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣ ಪಾವತಿಸಲು ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ 6 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ತೀರ್ಮಾನಿಸಿತ್ತು. ಇದು ಕೂಡ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಷೇರು ಪೇಟೆಯಲ್ಲಿ ಸಕ್ಕರೆ ಕಾರ್ಖಾನೆಗಳ ಷೇರುಗಳ ಮೌಲ್ಯ ಹೆಚ್ಚಾಯಿತು. ಇದರ ಜತೆಗೆ ಬ್ಲ್ಯೂಚಿಪ್ ಷೇರುಗಳ ಬೆಲೆ ಸುಧಾರಿಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳ ಉತ್ತಮ ನಿರ್ವಹಣೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್