ಐಟಿಫಿನ್ ಟಿಫಿನ್ ಬಾಕ್ಸ್
ಐಟಿಫಿನ್(www.itiffin.in) ಸುಧಾರಿತ ಪೋಷಕಾಂಶಗಳನ್ನು ಸಮತೋಲಿತ ಮತ್ತು ಪೌಷ್ಟಿಕಾಂಶಯುಕ್ತ ಟಿಫಿನ್ ಬಾಕ್ಸ್ ರೂಪದಲ್ಲಿ ಒದಗಿಸುವ ಒಂದು ಆನ್‍ಲೈನ್..
ಐಟಿಫಿನ್(www.itiffin.in) ಸುಧಾರಿತ ಪೋಷಕಾಂಶಗಳನ್ನು ಸಮತೋಲಿತ ಮತ್ತು ಪೌಷ್ಟಿಕಾಂಶಯುಕ್ತ ಟಿಫಿನ್ ಬಾಕ್ಸ್ ರೂಪದಲ್ಲಿ ಒದಗಿಸುವ ಒಂದು ಆನ್‍ಲೈನ್ ಪೋರ್ಟಲ್ ಆಗಿದ್ದು, ಸೌಲಭ್ಯವಂಚಿತ ಮಕ್ಕಳಿಗಾಗಿ ಪೌಷ್ಟಿಕಾಂಶಯುಕ್ತ ಉಪಾಹಾರಗಳನ್ನು ಪೂರೈಸುತ್ತಿದೆ.
ಐಟಿಫಿನ್, ಏಂಜೆಲ್ಸ್ ಚಿಲ್ಡ್ರನ್ಸ್ ಹೋಮ್ ನ ಅನಾಥ ಮಕ್ಕಳಿಗೆ ನಿತ್ಯ ಅನ್ನ, ಸಾಂಬಾರ್, ರಸಂ, ಪೂರಿ ಮತ್ತು ಮಸಾಲೆ ದೋಸೆಯನ್ನು ಒದಗಿಸುತ್ತಿದೆ. ಇದರೊಂದಿಗೆ ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕ ಆಹಾರವನ್ನೂ ನೀಡುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ತಪನ್ ಕುಮಾರ್ ಮಾತನಾಡಿ, ಮೊದಲ ಸಿಎಸ್‍ಆರ್ ಕಾರ್ಯಕ್ರಮ ಇದಾಗಿದೆ. ಆಹಾರದಲ್ಲಿನ ತರಕಾರಿ, ಮಾಂಸ ಮತ್ತು ಚೀಸ್ ಇತ್ಯಾದಿಗಳನ್ನು ಮಕ್ಕಳಿಗೆ ಪೋಷಕಯುಕ್ತ ತಿನಿಸಾಗಿ ನೀಡಲು ಆಹಾರ ತಜ್ಞರು ನಿರ್ಧರಿಸಿರುವುದಾಗಿ ತಿಳಿಸಿದರು.