ವಾಣಿಜ್ಯ

ಕೆನರಾ ಬ್ಯಾಂಕ್ ಲಾಭ ರು.529 ಕೋಟಿ

Manjula VN

ಬೆಂಗಳೂರು: ಸೆಪ್ಟೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾಬ್ಯಾಂಕ್ ರು.529 ಕೋಟಿ ನಿವ್ವಳ ಲಾಭ ಗಳಿಸಿದೆ.

ನಗರದಲ್ಲಿನ ಬ್ಯಾಂಕ್‍ನ ಪ್ರಧಾನ ಕಾಚೇರಿಯಲ್ಲಿ ಬುಧವಾರ ಹಣಕಾಸು ವರದಿ ಬಿಡುಗಡೆ ಮಾಡಿದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮಾ, ಈ ಅವಧಿಯಲ್ಲಿ ರು.529 ಕೋಟಿ ನಿವ್ವಳ ಲಾಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10.44 ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದರು.

ಬ್ಯಾಂಕ್‍ನ ಒಟ್ಟಾರೆ ಆದಾಯ ರು.1,944 ಕೋಟಿ ಇದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.19.54 ರಷ್ಟು ಪ್ರಗತಿ ಕಂಡಿದೆ. ಪ್ರಧಾನಮಂತ್ರಿ ಜನಧನ ಯೋಜನೆಯಲ್ಲಿ 70.59 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಉಳಿತಾಯ ಹಾಗೂ ಚಾಲ್ತಿ ಖಾತೆಯಲ್ಲಿ ರು.1,011 ಕೋಟಿ ಜಮಾ ಆಗಿದೆ. ಈ ಯೋಜನೆಯಡಿ 94,267 ಖಾತೆದಾರರಿಗೆ ಓವರ್ ಡ್ರಾಫ್ಟ್ ಸೌಲಭ್ಯ ನೀಡಲಾಗಿದ್ದು, ಇದುವರೆಗೆ ರು.17.11 ಕೋಟಿ ವಿತರಿಸಲಾಗಿದೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ 51.86 ಲಕ್ಷ ಹಾಗೂ ಸುರಕ್ಷಾ ಬಿಮಾ ಯೋಜನೆಯಲ್ಲಿ 43.98 ಲಕ್ಷ ನೋಂದಣಿ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಹರಿದೀಶ್ ಕುಮಾರ್, ಪಿ.ಎಸ್.ರಾವತ್ ಇದ್ದರು.

SCROLL FOR NEXT