ವಾಣಿಜ್ಯ

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ವರ್ಷದಲ್ಲೇ ಮೊದಲ ಬಾರಿಗೆ ದರದಲ್ಲಿ ಜಿಗಿತ

Shilpa D

ನವದೆಹಲಿ: ಕಳೆದ ಐದು ದಿನಗಳಿಂದ ನಿರಂತರವಾಗಿ ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಇಂದು ಈ ವರ್ಷದಲ್ಲೇ ಮೊದಲ ಬಾರಿಗೆಂಬಂತೆ, ಒಂದೇ ದಿನ 660 ರೂ.ಗಳ ಜಿಗಿತ ಸಾಧಿಸಿ ಬುಲಿಯನ್‌ ಮಾರ್ಕೆಟ್‌ನಲ್ಲಿ ಹತ್ತು ಗ್ರಾಮಿಗೆ 26,810 ರೂ.ಗಳ ಎತ್ತರಕ್ಕೇರಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಅಮೆರಿಕದ ಪೇ ರೋಲ್‌ ಅಂಕಿ ಅಂಶಗಳು ನಿರೀಕ್ಷೆಗಿಂತ ಕೆಳಮಟ್ಟದಲ್ಲಿರುವುದು ದಾಖಲಾಗಿದೆಯಲ್ಲದೆ ವೇತನ ಪ್ರಮಾಣವು ನಿಶ್ಚಲವಾಗಿರುವುದು ಕಂಡು ಬಂದಿದೆ. ಇದರ ಪರಿಣಾಮವಾಗಿ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಈ ವರ್ಷ ಬಡ್ಡಿ ದರ ಏರಿಸುವ ಸಾಧ್ಯತೆ ಕ್ಷೀಣಗೊಂಡಿದೆ. ಇದರಿಂದಾಗಿ ಚಿನ್ನ ಒಂದೇ ದಿನದಂದು ಶೇ.2.1ರ ನೆಗತವನ್ನು ಸಾಧಿಸಿದೆ ಎಂದು ಪರಿಣತರು ಹೇಳಿದ್ದಾರೆ.

ಚಿನ್ನದ ದರ ಜಿಗಿತಕ್ಕೆ ಅನುಗುಣವಾಗಿ ಬೆಳ್ಳಿ ಕೂಡ ಕೆಜಿಗೆ 1,200 ರೂ.ಗಳ ಏರಿದ್ದು 35,800 ರೂ.ಗಳ ದರ ದಾಖಲಿಸಿದೆ. ಕೈಗಾರಿಕಾ ಘಟಕಗಳು ಹಾಗೂ ನ್ಯಾಣ ಟಂಕಸಾಲೆಯವರಿಂದ ಬೇಡಿಕೆ ಹೆಚ್ಚಿದ್ದೇ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಾಣಲು ಕಾರಣವಾಗಿದೆ.

ದೆಹಲಿಯಲ್ಲಿ  99.9 ಮತ್ತು 99.5 ಶುದ್ಧತೆ ಚಿನ್ನ ಹತ್ತು ಗ್ರಾಂಗೆ 660 ರೂ.ಗಳ ಏರಿಕೆ ದಾಖಲಿಸಿವೆ. ಪರಿಣಾಮವಾಗಿ ಇವುಗಳ ಬೆಲೆಯು ಅನುಕ್ರಮವಾಗಿ ತಲಾ ಹತ್ತು ಗ್ರಾಂಗೆ 26,810 ಮತ್ತು 26,660 ರೂ.ಗಳ ಮಟ್ಟ ತಲುಪಿವೆ. ಕಳೆದ ಆಗಸ್ಟ್‌ 12 ರಂದು ಚಿನ್ನ ಒಂದೇ ದಿನ 600 ರೂ.ಗಳ ಜಿಗಿತವನ್ನು ಕಂಡಿತ್ತು.



SCROLL FOR NEXT