ವಾಣಿಜ್ಯ

ತೆರಿಗೆ ಸಂಗ್ರಹ ರು.50 ಸಾವಿರ ಕೋಟಿ ಕುಸಿತ

Rashmi Kasaragodu
ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನಲ್ಲಿ ತೆರಿಗೆ ಸಂಗ್ರಹ ರು.50 ಸಾವಿರ ಕೋಟಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಂದಾಜಿಸಿದೆ.
ಆದರೂ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಪ್ರಗತಿ ಬಜೆಟ್ ನಲ್ಲಿ ಅಂದಾಜಿಸಿರುವ ಶೇ.7.5ರಷ್ಟಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ದೇಶದ ಹಣಕಾಸು ನೀತಿಗಳು ಬಲಿಷ್ಠವಾಗಿದೆ. ಹೊರಗಡೆಯಿಂದ
ಎದುರಾಗಬಹುದಾದ ಎಂತದೇ ಸಮಸ್ಯೆಯನ್ನು ನಿಭಾಯಿಸುವ ಶಕ್ತಿ ಇದ್ದು ದೇಶದ ಆರ್ಥಿಕ ಪ್ರಗತಿಯನ್ನು ಚೇತರಿಕೆ ಹಾದಿಯಲ್ಲಿಟ್ಟು ಸರ್ವತೋಮುಖ
ಅಭಿವೃದ್ಧಿ ಸಾಧಿಸಲಿದೆ ಎಂದು ಹಣಕಾಸು ಕಾರ್ಯದರ್ಶಿ ರತನ್ ವಟಲ್ ಹೇಳಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಂ ಮತ್ತು ಇತರೆ ಕಾರ್ಯದರ್ಶಿ ಗಳೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತೆರಿಗೆ ಸಂಗ್ರಹ ತುಂಬಾ ಆತಂಕಕಾರಿಯಾ ಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ. ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ಬಜೆಟ್‍ನಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಶೇ.5ರಿಂದ 7ರಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಬಹುದು ಎಂದಿದ್ದಾರೆ. ಈ ಸಾಲಿನಲ್ಲಿ ಜಿಡಿಪಿ ಪ್ರಗತಿ ಶೇ.7.5ರಷ್ಟು ಇರಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಂಠ ದಾಸ್ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರೂ ದೇಶದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಕಾಣಲಿದೆ
ಎಂದಿದ್ದಾರೆ. ವಿತ್ತೀಯ ಮತ್ತು ಚಾಲ್ತಿ ಖಾತೆ ಕೊರತೆ ಕಡಿಮೆ ಮಾಡಲಾಗಿದೆ. ಈ ವರ್ಷದಲ್ಲಿ ವಿತ್ತೀಯ ಕೊರತೆ  ಗುರಿ ತಲುಪಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.ಹಣಕಾಸು ಸಚಿವಾಲಯ ಬಜೆಟ್ ಸಿದ್ದತೆಯನ್ನು  ಎಂರಡು ತಿಂಗಳ ಮೊದಲೇ ಆರಂಭಿಸಿದೆ. ಆರ್ಥಿಕತೆಯನ್ನು ಮತ್ತಷ್ಟು ವೇಗಗೊಳಿಸಲು ಅಗತ್ಯವಾದಸಂರಚನೆಗಳನ್ನು ವೇಗಗೊಳಿಸುವ ಉದ್ದೇಶದಿಂದ  ಮೊದಲೇ ಸಿದ್ಧತೆ ನಡೆಸಲಾಗುತ್ತಿಗೆ ಎಂದು ಹೇಳಿದರು ಕೇಂದ್ರ ವಲಯದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ತರ್ಕಬದ್ಧಗೊಳಿಸಲು ಒಟ್ಟಾಗಿ ಕೆಲಸಮಾಡುತ್ತಿರುವುದಾಗಿ ತಿಳಿಸಿದ್ದಾರೆ.
SCROLL FOR NEXT