ನವದೆಹಲಿ: ಹಬ್ಬ ಮತ್ತು ಮದುವೆ ಸೀಸನ್‍ಗಾಗಿ ಆಭರಣ ತಯಾರಕರು ಹೆಚ್ಚಿನ ಚಿನ್ನದ ಖರೀದಿಗೆ ಮುಂದ್ದಾಗಿದ್ದರಿಂದ ಹಾಗೂಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ಇದ್ದುದರಿಂದ ಬುಧವಾರದ ವಹಿವಾಟಿನಲ್ಲಿ ಪ್ರತಿಹತ್ತು 10 ಗ್ರಾಂ ಚಿನ್ನದ ದರ ರು.385 ಏರಿಕೆ ಕಂಡು ರು.27, 185ಕ್ಕೆ ತಲುಪಿದೆ.
ಚಿನ್ನದ ಹಾದಿಯಲ್ಲೇ ಮೇಲೇರಿದ ಬೆಳ್ಳಿ ಸಹ ಪ್ರತಿ ಕೆಜಿ ದರ ರು.500 ಏರಿಕೆಯೊಂದಿಗೆ ರು.37,300ಕ್ಕೆ ತಲುಪಿತು. ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿದರಗಳನ್ನು ಏರಿಸುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಹೂಡಿಕೆದಾರರು ಚಿನ್ನ, ಬೆಳ್ಳಿಯಲ್ಲಿ ಹೂಡಿಕೆಗೆ ಮುಂದಾದರು. ಇದರಿಂದ ದರಗಳು ಏರಿಕೆ ಕಂಡವು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.