ವಾಣಿಜ್ಯ

ಶೇ.10 ರಷ್ಟು ಸ್ಟಾರ್ಟ್ ಅಪ್ ಗಳು ಮಾತ್ರ ಯಶಸ್ವಿಯಾಗುತ್ತವೆ : ಮೋಹನ್ ದಾಸ್ ಪೈ

Srinivas Rao BV

ಮುಂಬೈ: ಭಾರತದಲ್ಲಿ ಸ್ಟಾರ್ಟ್ ಅಪ್(ನವೋದ್ಯಮಗಳು) ಅಭಿವೃದ್ಧಿಯಾಗುತ್ತಿದೆಯಾದರೂ ಪ್ರಾಂರಭವಾಗುತ್ತಿರುವ ನವೋದ್ಯಮಗಳ ಪೈಕಿ ಶೇ.10 ರಷ್ಟು ಮಾತ್ರ ಯಶಸ್ಸು ಗಳಿಸಲಿದೆ ಎಂದು ಇನ್ ಫೋಸಿಸ್ ನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ಟ್ ಅಪ್ ಗಳು ಅಭಿವೃದ್ಧಿಯಾದಂತೆ ಸರ್ಕಾರ ಸೂಕ್ತ ನೀತಿಗಳನ್ನು ರೂಪಿಸುವುದರಿಂದ ಅತಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರಸ್ತುತ ಪ್ರಾರಂಭವಾಗಿರುವ ನವೋದ್ಯಮಗಳ ಪೈಕಿ ಕೇವಲ ಶೇ.10 ರಷ್ಟು ಮಾತ್ರ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯ. ಉಳಿದವು ವಿಫಲವಾಗಲಿದೆ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ನಿರೀಕ್ಷೆಯಂತೆ ಜಾರಿಯಾದರೆ, ಸ್ಟಾರ್ಟ್ ಅಪ್ ಎಕೋಸಿಸ್ಟಮ್  ಮುಂದಿನ ಹತ್ತು ವರ್ಷಗಳಲ್ಲಿ 1 ಲಕ್ಷ ಹೊಸ ಸಂಸ್ಥೆಗಳಾಗಿ ಅಭಿವೃದ್ಧಿಯಾಗಲಿದೆ. ಇದರಿಂದಾಗಿ 3 .5 ಮಿಲಿಯನ್ ಜನರಿಗೆ ಉದ್ಯೋಗ ಸಿಗಲಿದ್ದು  $ 500 ಬಿಲಿಯನ್ ಗುರಿ ಹೊಂದಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅತ್ಯುತ್ತಮ ಪ್ರಯೋಗವಾಗಿದ್ದು, ಸರಿಯಾಗಿ ಜಾರಿಗೊಳಿಸಿದಲ್ಲಿ ಭಾರತವನ್ನು ಪರಿವರ್ತಿಸಲಿದೆ ಎಂದು ಮೋಹನ್ ದಾಸ್ ಪೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT