ಸಾಂದರ್ಭಿಕ ಚಿತ್ರ 
ವಾಣಿಜ್ಯ

ಚಿನ್ನ ಠೇವಣಿ ಯೋಜನೆ: ಒಂದು ಮಾಹಿತಿ

ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಠೇವಣಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ನಿಯಮಗಳನ್ನು ಪ್ರಕಟಿಸಿದೆ. ಇದಕ್ಕೆ ಸಂಬಂಧಪಟ್ಟ...

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಠೇವಣಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ನಿಯಮಗಳನ್ನು ಪ್ರಕಟಿಸಿದೆ. ಇದಕ್ಕೆ ಸಂಬಂಧಪಟ್ಟ ಅಗತ್ಯ ಪ್ರಕ್ರಿಯೆಗಳನ್ನು ಬ್ಯಾಂಕುಗಳು ಮಾಡುತ್ತಿದ್ದು, ಯೋಜನೆ ಜಾರಿ ಯಾವಾಗ ಎಂದು ಸದ್ಯದಲ್ಲಿಯೇ ಗೊತ್ತಾಗಲಿದೆ. ಮುಂದಿನ ತಿಂಗಳು ದೀಪಾವಳಿಗೂ ಮುನ್ನ ಚಿನ್ನ ಠೇವಣಿ ಯೋಜನೆಯನ್ನು ಆರಂಭಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದರು.

ಹಾಗಾದರೆ ಈ ಚಿನ್ನ ಠೇವಣಿ ಯೋಜನೆ ಅಂದರೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
1. ಚಿನ್ನ ಠೇವಣಿ ಯೋಜನೆಯಡಿ ಗ್ರಾಹಕರು ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಬಡ್ಡಿ ಪಡೆಯುವಂತೆ ಚಿನ್ನವನ್ನು ಕೂಡ ಇಟ್ಟು ಬಡ್ಡಿ ಪಡೆಯಬಹುದು.ನಾವು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ತೆರೆಯುವಂತೆ ಇದು ಕೂಡ ಒಂದು ಉಳಿತಾಯ ಯೋಜನೆ.
2. ಕಚ್ಚಾ ಚಿನ್ನವನ್ನು ಕೂಡ ಠೇವಣಿ ಇಡಬಹುದು. ಚಿನ್ನದ ತುಂಡುಗಳು, ನಾಣ್ಯಗಳು, ಆಭರಣಗಳನ್ನು ಇಡಬೇಕು. ಕನಿಷ್ಟ 30 ಗ್ರಾಂ ಇರಬೇಕು. ಗರಿಷ್ಟ ಎಷ್ಟು ಬೇಕಾದರೂ ಚಿನ್ನವನ್ನು ಬ್ಯಾಂಕಿನಲ್ಲಿ ಇಡಬಹುದು.
3. ಎಲ್ಲಾ ವಾಣಿಜ್ಯ ಬ್ಯಾಂಕುಗಳಲ್ಲಿ ಚಿನ್ನವನ್ನು ಠೇವಣಿ ಇಡುವ ಸೌಲಭ್ಯವಿದೆ. ನಿಗದಿತ ಬ್ಯಾಂಕುಗಳು ತಾವೇ ಬಡ್ಡಿ ದರವನ್ನು ನಿಗದಿಪಡಿಸುತ್ತವೆ.
4. ಅವಧಿ ಮುಗಿದ ನಂತರ ಚಿನ್ನವನ್ನು ಬ್ಯಾಂಕಿನಲ್ಲಿ ಹಿಂಪಡೆಯುವ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಯಾವ ಬೆಲೆಯಿದೆ ಎಂಬುದರ ಆಧಾರದ ಮೇಲೆ ಬಡ್ಡಿದರ ನಿಗದಿಯಾಗುತ್ತದೆ. ಬಡ್ಡಿಯನ್ನು ಹಣದ ರೂಪದಲ್ಲಿ ಇಲ್ಲವೇ ಚಿನ್ನದ ರೂಪದಲ್ಲಿಯೂ ಪಡೆಯಬಹುದು. ಇದನ್ನು ಗ್ರಾಹಕರು ಚಿನ್ನವನ್ನು ಠೇವಣಿ ಇಡುವಾಗಲೇ ನಿರ್ಧರಿಸಬೇಕು. ನಂತರ ಬದಲಾಯಿಸಲು ಆಗುವುದಿಲ್ಲ.
5. ಈ ಯೋಜನೆಯಡಿಯಲ್ಲಿ ಬ್ಯಾಂಕುಗಳಲ್ಲಿ ಮೂರು ವಿಧಗಳಲ್ಲಿ ಚಿನ್ನವನ್ನು ಠೇವಣಿ ಇಡಬಹುದು. 1 ವರ್ಷದಿಂದ ಮೂರು ವರ್ಷ ಅವಧಿಗೆ ಕಡಿಮೆ ಅವಧಿ, 5ರಿಂದ 7 ವರ್ಷಕ್ಕೆ ಮಧ್ಯಮಾವಧಿ ಹಾಗೂ 12ರಿಂದ 15 ವರ್ಷಗಳ ಅವಧಿಗೆ ದೀರ್ಘಾವಧಿಗೆ ಚಿನ್ನಗಳನ್ನು ಠೇವಣಿ ಇಡಬಹುದು.
6. ಸರ್ಕಾರ ಸೂಚಿಸಿದ ಚಿನ್ನ ಶುದ್ಧತೆ ಕೇಂದ್ರಗಳಲ್ಲಿ ಚಿನ್ನಗಳನ್ನು ಪರೀಕ್ಷಿಸಿದ ಬಳಿಕವಷ್ಟೇ ಚಿನ್ನಗಳನ್ನು ಬ್ಯಾಂಕುಗಳು ಠೇವಣಿ ಇಟ್ಟುಕೊಳ್ಳಲು ಒಪ್ಪಿಗೆ ನೀಡುತ್ತವೆ. ನಕಲಿ ಚಿನ್ನದ ಹಾವಳಿಯನ್ನು ತಡೆಗಟ್ಟಲು ಈ ಕ್ರಮ.
7. ಅವಧಿಗೆ ಮೊದಲೇ ಚಿನ್ನವನ್ನು ವಾಪಾಸ್ಸು ಪಡೆಯಬಹುದು. ಅದಕ್ಕೆ ಬ್ಯಾಂಕು ನಿರ್ದಿಷ್ಟ ದಂಡ ಹಾಕುತ್ತದೆ.
8. ಜಂಟಿಯಾಗಿ ಬ್ಯಾಂಕು ಖಾತೆ ತೆರೆದಂತೆ ಚಿನ್ನವನ್ನು ಕೂಡ ಜಂಟಿಯಾಗಿ ಇಡಬಹುದು. ಇದಕ್ಕೆ ಕೂಡ ಸೂಕ್ತ ನಿಯಮಗಳಿವೆ. ನಾಮಿನಿ ಹೆಸರುಗಳನ್ನು ಸೂಚಿಸಬೇಕು.
9. ಭಾರತದ ಎಲ್ಲಾ ನಾಗರಿಕರು, ಮ್ಯೂಚ್ಯುವಲ್ ಫಂಡ್/ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ತೊಡಗಿರುವವರು ಸಹ ಚಿನ್ನ ಠೇವಣಿ ಇಡಬಹುದು.
10. ದೇಶದ ನಿವಾಸಿಗಳ ಮನೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಇರುವ ಸುಮಾರು 20 ಸಾವಿರ ಟನ್ ಚಿನ್ನವನ್ನು ಚಲಾವಣೆಗೆ ತಂದು ಹೊರ ದೇಶಗಳಿಂದ ಚಿನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT