ನವದೆಹಲಿ: ತಿಂಗಳ ಎರಡನೇ ಮತ್ತು ನಾಲ್ಕನೆ ಶನಿವಾರ ಬ್ಯಾಂಕ್‍ಗಳಿಗೆ ರಜೆ ನೀಡಲಾಗಿದೆ. ಆ ದಿನ ಆರ್‍ಟಿಜಿಎಸ್ ಸೌಲಭ್ಯವೂ ಇರುವುದಿಲ್ಲ ಎಂದು ಆರ್‍ಬಿಐ ಹೇಳಿದೆ.
ಉಳಿದ ಶನಿವಾರಗಳಂದು ಈ ಸೌಲಭ್ಯ ಇರಲಿದೆ ಎಂದು ತಿಳಿಸಿದೆ. ಹೊಸ ನಿಯಮಗಳ ಅನುಸಾರ ವಹಿವಾಟು ದಿನಗಳಂದು ಬೆಳಗ್ಗೆ 8ರಿಂದ ಸಂಜೆ 4.30ರವರೆಗೂ ಸಾರ್ವಜನಿಕ ಸೇವೆ ಇರಲಿದೆ. ಎಂಟು ಗಂಟೆಗೆ ಬ್ಯಾಂಕ್‍ನ ಎಲ್ಲ ವ್ಯವಹಾರ ಮುಗಿಯಲಿದೆ.ಬ್ಯಾಂಕಿಂಗ್ ನೌಕರರ ಸಂಘಟನೆಗಳು ದೀರ್ಘಕಾಲದಿಂದ ಶನಿವಾರ ರಜೆ ಬೇಕೆಂಬ ಬೇಡಿಕೆ ಇಟ್ಟಿದ್ದವು.