ಕಾರು ಮಾರಾಟ ಅಲ್ಪ ಏರಿಕೆ
ದೇಶದ ಕಾರು ತಯಾರಿಕಾ ಕಂಪನಿಗಳ ಮಾರಾಟ ಆಗಸ್ಟ್ ನಲ್ಲಿ ತುಸು ಏರಿಕೆ ಕಂಡಿದೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಮಾರಾಟ ಸ್ವಲ್ಪ ಏರಿದ್ದರೆ ಹ್ಯುಂಡೈ ಅತ್ಯತ್ತಮ ತಿಂಗಳ ಮಾರಾಟ ದಾಖಲಿಸಿದೆ...
ನವದೆಹಲಿ: ದೇಶದ ಕಾರು ತಯಾರಿಕಾ ಕಂಪನಿಗಳ ಮಾರಾಟ ಆಗಸ್ಟ್ ನಲ್ಲಿ ತುಸು ಏರಿಕೆ ಕಂಡಿದೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಮಾರಾಟ ಸ್ವಲ್ಪ ಏರಿದ್ದರೆ ಹ್ಯುಂಡೈ ಅತ್ಯತ್ತಮ ತಿಂಗಳ ಮಾರಾಟ ದಾಖಲಿಸಿದೆ.
ಹಾಗಿದ್ದರೂ ಹೋಂಡಾ ಮತ್ತು ಮಹಿಂದ್ರ ಅಂಡ್ ಮಹಿಂದ್ರ ಮಾರಾಟ ಇಳಿಮುಖ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳ ಮಾರಾಟ ಶೇ.8.6ರಷ್ಟು ಏರಿಕೆ ಕಂಡಿದ್ದರೆ ಹ್ಯುಂಡೈ ಮಾರಾಟ ಶೇ.20ರಷ್ಟು ಏರಿಕೆ ದಾಖಲಿಸಿದೆ. ಟಾಟಾ ಮೋಟಾರ್ಸ್ನ ವಾಹನ ಮಾರಾಟ ಶೇ.19ರಷ್ಟು ಏರಿದೆ. ಹೋಂಡಾ ಕಾರ್ಸ್ ಶೇ.6.58ರಷ್ಟು ಪ್ರಗತಿ ದಾಖಲಿಸಿದ್ದರೆ ಮಹಿಂದ್ರ ಅಂಡ್ ಮಹಿಂದ್ರ ಮಾರಾಟ ಶೇ.3.10ರಷ್ಟು ಇಳಿಮುಖ ಕಂಡಿದೆ.
ವಾಹನಗಳ ಮಾರಾಟ ಚೇತರಿಕೆ ಮಂದವಾಗಿದೆ. ಮುಂದೆ ಹಬ್ಬ ಮತ್ತು ಮದುವೆ ಸೀಸನ್ ಇರುವುದರಿಂದ ಮಾರಾಟದಲ್ಲಿ ಏರಿಕೆ ಕಾಣುವ ವಿಶ್ವಾಸವನ್ನು ಮಹಿಂದ ಕಂಪನಿ ಆಟೋ ವಿಭಾಗದ ಮುಖ್ಯ ಕಾರ್ಯ ನಿರ್ವಾಹಕರಾದ ಪ್ರವೀಣ್ ಷಾ ವ್ಯಕ್ತಪಡಿಸಿದ್ದಾರೆ.