ವಾಣಿಜ್ಯ

ಟಾಟಾ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಮುಂದಾದ ನುಸ್ಲಿ ವಾಡಿಯಾ

Srinivasamurthy VN

ನವದೆಹಲಿ: ಟಾಟಾ ಸಂಸ್ಥೆಯ ಬಿಕ್ಕಟ್ಟು ತಾರಕಕ್ಕೇರಿದ್ದು, ಉಚ್ಛಾಟಿತ ನಿರ್ದೇಶಕರಾದ ಸೈರಸ್ ಮಿಸ್ತ್ರಿ ಹಾಗೂ ನುಸ್ಲಿ ವಾಡಿಯಾ ಅವರು ಇದೀಗ ಟಾಟಾ ಸಂಸ್ಥೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ನಿನ್ನೆಯಷ್ಟೇ ಟಾಟಾ ಮೋಟಾರ್ಸ್ ಸಂಸ್ಥೆಯ ಸ್ವತಂತ್ರ ನಿರ್ದೇಶಕ ಹುದ್ದೆಯಿಂದ ನುಸ್ಲಿ ವಾಡಿಯಾ ಅವರನ್ನು ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಅವರನ್ನು ಟಾಟಾ ಕೆಮಿಕಲ್ಸ್ ಸಂಸ್ಥೆಯ ಸ್ವತಂತ್ರ ನಿರ್ದೇಶಕ  ಹುದ್ದೆಯಿಂದಲೂ  ವಜಾಗೊಳಿಸಲಾಗಿದೆ. ಶುಕ್ರವಾರ ನಡೆದಿದ್ದ ಕಂಪೆನಿಯ ವಿಶೇಷ ಮಹಾಸಭೆ (ಇಜಿಎಂ) ಯಲ್ಲಿ ಶೇರುದಾರರು ನುಸ್ಲಿ ವಾಡಿಯಾ ಅವರನ್ನು ಸ್ವತಂತ್ರ ನಿರ್ದೇಶಕರ ಹುದ್ದೆಯಿಂದ ಕೆಳಗಿಳಿಸುವ ನಿರ್ಧಾರಕ್ಕೆ ಮತ ಹಾಕಿದ್ದರು.

ಟಾಟಾ ವಿರುದ್ಧ ಕಾನೂನು ಸಮರ
ಇನ್ನು ತಮ್ಮನ್ನು ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಟಾಟಾ ವಿರುದ್ಧ ನುಸ್ಲಿ ವಾಡಿಯಾ ಕಾನೂನು ಸಮರ ಸಾರಿದ್ದಾರೆ. ಟಾಟಾ ಹಾಗೂ ಟಾಟಾ ಸನ್ಸ್ ವಿರುದ್ಧ ನುಸ್ಲಿ ವಾಡಿಯಾ ಕ್ರಮಿನಲ್ ಮಾನನಷ್ಟ  ಮೊಕದ್ದಮೆ ಹೂಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮನ್ನು ಸಂಸ್ಥೆಯಿಂದ ಕಿತ್ತುಹಾಕಲು ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಇದರಿಂದ ತಮ್ಮ ವರ್ಚಸ್ಸಿಗೆ ಹಾಗೂ ಗೌರವಕ್ಕೆ ಧಕ್ಕೆಯಾಗಿದೆ ಎಂದು  ಆರೋಪಿಸಿ ಕ್ರಿಮನಲ್ ಮಾನನಷ್ಚ ಮೊಕದ್ದಮೆ ಹೂಡಿದ್ದಾರೆ. ಅಲ್ಲದೆ 3 ಸಾವಿರ ಕೋಟಿ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT