ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಧಿಕ ಮಾರಾಟ ಒತ್ತಡ ಉಂಟಾದ ಹಿನ್ನಲೆಯಲ್ಲಿ ಸೆನ್ಸೆಕ್ಸ್ 59 ಅಂಕಗಳನ್ನು ಕಳೆದುಕೊಂಡಿದೆ.
ವಿದೇಶ ಮಾರುಕಟ್ಟೆಗಳಿಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದ ಹಿನ್ನಲೆಯಲ್ಲಿ ಭಾರತೀಯ ಬಂಡವಾಳದಾರರು ಷೇರುಗಳ ಮಾರಾಟಕ್ಕೆ ಮುಂದಾದ ಹಿನ್ನಲೆಯಲ್ಲಿ ಸೆನ್ಸೆಕ್ಸ್ 59 ಅಂಕಗಳನ್ನು ಕಳೆದುಕೊಳ್ಳುವ ಮೂಲಕ 24, 558 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿಯಲ್ಲಿಯೂ ಕೂಡ ಅಲ್ಪ ಇಳಿಕೆ ಕಂಡುಬಂದಿದ್ದು, 17 ಅಂಕಗಳ ಇಳಿಕೆಯೊಂದಿಗೆ ನಿಫ್ಟಿ 7,472 ಅಂಕಗಳಿಗೆ ಸ್ಥಿರವಾಗಿದೆ.
ತೈಲೋತ್ಪನ್ನ ಸಂಸ್ಥೆಗಳಾದ ಎಲ್ ಎನ್ ಜಿ, ಒನ್ ಜಿಸಿ, ಭಾರತ್ ಪೆಟ್ರೋಲಿಯಂ, ಆಯಿಲ್ ಇಂಡಿಯಾ, ಇಂಡಿಯನ್ ಆಯಿಲ್ ಮತ್ತು ಹೆಚ್ ಪಿಸಿಎಲ್ ಸಂಸ್ಥೆಗಳು ನಷ್ಟ ಅನುಭವಿಸಿದ್ದು, ಈ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಶೇ.0.5ರಿಂದ 4 ರಷ್ಟು ಇಳಿಕೆ ಕಂಡುಬಂದಿದೆ. ಇದಲ್ಲದೆ ಐಟಿ ವಲಯ, ಆರೋಗ್ಯ, ಎಫ್ ಎಂಸಿಜಿ ಷೇರುಗಳ ಮೌಲ್ಯದಲ್ಲಿಯೂ ಕುಸಿತ ಕಂಡುಬಂದಿದೆ. ಈ ಹಿಂದೆ ಲಾಭ ಗಳಿಸಿದ್ದ ಇನ್ಫೋಸಿಸ್, ಟಿಸಿಎಸ್ ಮತ್ತು ಹೆಚ್ ಸಿಎಲ್ ಟೆಕ್ನಾಲಜಿಸ್ ಸಂಸ್ಥೆಯ ಷೇರುಗಳ ಮೌಲ್ಯ ಕೂಡ ಕಡಿತಗೊಂಡಿದೆ.