ಚಿನ್ನದ ದರ ಏರಿಕೆ (ಸಂಗ್ರಹ ಚಿತ್ರ) 
ವಾಣಿಜ್ಯ

ಚಿನ್ನ ದರ ಬರೋಬ್ಬರಿ 850 ರು. ಏರಿಕೆ

ಗಗನದತ್ತ ಮುಖ ಮಾಡಿರುವ ಚಿನ್ನದ ದರ ಶುಕ್ರವಾರ ಬರೊಬ್ಬರಿ 850 ರು. ಏರಿಕೆಯಾಗುವ ಮೂಲಕ ಪ್ರತೀ 10 ಚಿನ್ನದ ದರ 29, 650ಕ್ಕೆ ಏರಿಕೆಯಾಗಿದೆ...

ಮುಂಬೈ: ಗಗನದತ್ತ ಮುಖ ಮಾಡಿರುವ ಚಿನ್ನದ ದರ ಶುಕ್ರವಾರ ಬರೊಬ್ಬರಿ 850 ರು. ಏರಿಕೆಯಾಗುವ ಮೂಲಕ ಪ್ರತೀ 10 ಚಿನ್ನದ ದರ 29, 650ಕ್ಕೆ ಏರಿಕೆಯಾಗಿದೆ.

ಶುಕ್ರವಾರದ ವಹಿವಾಟು ಅಂತ್ಯಗೊಂಡಾಗ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 850 ರು. ಏರಿಕೆಯೊಂದಿಗೆ ಶೇ.99.9 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 29,650 ರು. ಆಗಿದೆ.  ಶೇ.99.5 ಶುದ್ಧತೆಯ ಚಿನ್ನದ ಬೆಲೆ 29,500 ರು. ಆಗಿದೆ. ಕಳೆದ ವರ್ಷ ಇಳಿಕೆಯತ್ತ ಸಾಗಿದ್ದ ಚಿನ್ನದ ಬೆಲೆ ಈ ವರ್ಷಾರಂಭದಿಂದಲೇ ಏರಿಕೆಯತ್ತ ಸಾಗುತ್ತಿದ್ದು, ಇದೀಗ 30,000 ರೂಪಾಯಿ ಗಡಿ  ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಹೆಚ್ಚಾಗುತ್ತಿದ್ದು, 2011ರ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಕೇವಲ ಒಂದು ವಾರದ ಅವಧಿಯಲ್ಲಿ ಚಿನ್ನದ ದರದಲ್ಲಿ ಶೇ. 5.5ರಷ್ಟು ಏರಿಕೆ  ದಾಖಲಿಸಿದೆ.  2016ರಲ್ಲಿ ಒಟ್ಟು ಶೇ.17ರಷ್ಟು ಏರಿಕೆಯಾಗಿದ್ದು, ಪ್ರತೀ ಔನ್ಸ್‌ಗೆ 1,260 ಡಾಲರ್ ಆಗಿದೆ. ಚೀನಾದ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತಗಳು ಮತ್ತು ಸದ್ಯದಲ್ಲಿಯೇ ಅಮೆರಿಕ  ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆಗಳಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ  ಡಾಲರ್ ಎದುರು ರುಪಾಯಿ ಮೌಲ್ಯ ಭಾರಿ ಕುಸಿತ ದಾಖಲಿಸುತ್ತಿದ್ದು, 68.30 ರು.ನಷ್ಟಾಗಿದೆ. ಇದೂ ಕೂಡ ಚಿನ್ನದ ದರ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲ ಕಠಿಣ ನಿರ್ಧಾರಗಳಿಂದ ಚಿನ್ನದ ಆಮದು ಇನ್ನಷ್ಟು ದುಬಾರಿಯಾಗುತ್ತಿದೆ. ಜತೆಗೆ ಖರೀದಿದಾರರಿಂದ ಬೇಡಿಕೆ  ಹೆಚ್ಚಾಗಿರುವುದು ಕೂಡಾ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮುಂಬೈ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 275 ರು.  ಏರಿಕೆಯಾಗುವುದರೊಂದಿಗೆ 29,110 ರು. ಆಗಿದೆ. ಬೆಳ್ಳಿ ಬೆಲೆಯೂ ಕೆಜಿಗೆ 750 ರು. ಏರಿಕೆಯಾಗಿ 37,850 ರು. ಆಗಿದೆ.

ಕಳೆದ 11 ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು, ಒಟ್ಟು 2,600 ರು. ಹೆಚ್ಚಾಗಿದೆ. 2015ರ ಡಿಸೆಂಬರ್‌ನಿಂದ ಚಿನ್ನದ ಬೆಲೆಯಲ್ಲಿ ಈವರೆಗೆ ಶೇ. 15ರಷ್ಟು ಹೆಚ್ಚಳವಾಗಿದೆ. 2016ರ  ಡಿ.15ರಂದು ಚಿನ್ನದ ಬೆಲೆ 10 ಗ್ರಾಂಗೆ 25250 ರು. ಇತ್ತು. 2014ರ ಮೇ 16ರ ಬಳಿಕ ಇದೇ ಮೊದಲ ಬಾರಿ ಚಿನ್ನದ ಬೆಲೆ ಈ ಹಂತ ತಲುಪಿದೆ. ಅಕ್ಷಯ ತೃತೀಯದ ದಿನ ಖರೀದಿ ಹೆಚ್ಚಲಿದ್ದು,  ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್