ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್) ಹಣ ಹಿಂಪಡೆಯಲು ನಿರ್ಧರಿಸಿದರೆ, ಆ ಪೈಕಿ ಶೇ.60 ರಷ್ಟು ಮೊತ್ತಕ್ಕೆ ತೆರಿಗೆ ಕಟ್ಟಬೇಕು. ಏಪ್ರಿಲ್ 1 ರಿಂದ ಇಪಿಎಫ್ ಕಟ್ಟುವ ಹಣಕ್ಕೆ ಇದು ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಂಡಿಸಿದ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜನರ ಸಂದೇಹಗಳಿಗೆ ಸ್ಪಷ್ಟವಾದ ವಿವರಣೆಯನ್ನು ಶೀಘ್ರವೇ ನೀಡುತ್ತೇವೆ ಎಂದು ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಸಚಿವ ಜಯಂತ್ ಸಿನ್ಹಾ ಮಂಗಳವಾರ ಹೇಳಿದ್ದಾರೆ.
ಸರ್ಕಾರದ ಈ ನಿರ್ಧಾರವು 6 ಕೋಟಿ ಉದ್ಯೋಗಿಗಳಿ ಹೊರೆಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್ )ಯಲ್ಲಿರುವ ಶೇ. 60ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ವಿಧಿಸಲು ಸರ್ಕಾರ ತೀರ್ಮಾನಿಸಿತ್ತು.
ಈ ಬಗ್ಗೆ ಜನರ ಆತಂಕಗಳ ನಮ್ಮ ಗಮನಕ್ಕೆ ಬಂದಿದೆ. ಈ ಕಾರಣದಿಂದಲೇ ನಾವು ಹೆಚ್ಚಿನ ವಿವರಣೆಗಳನ್ನು ನೀಡಬಯಸಿದ್ದೇವೆ. ಅಗತ್ಯ ಬಂದರೆ ಬಜೆಟ್ ನಿರ್ದೇಶನಗಳಲ್ಲಿ ಬದಲಾವಣೆಯನ್ನೂ ಮಾಡುತ್ತೇವೆ. ಇದರಿಂದಾಗಿ ಸದ್ಯದ ನೌಕರರ ಭವಿಷ್ಯ ನಿಧಿಯನ್ನು ಇದು ಬಾಧಿಸುವುದಿಲ್ಲ ಎಂದು ಎಂದು ಸಿನ್ಹಾ ಹೇಳಿದ್ದಾರೆ.