ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಪಾಕ್‍ಗೆ ಚಹಾ ರಫ್ತು ಶೇ.42ರಷ್ಟು ಏರಿಕೆ

ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಪಾಕಿಸ್ತಾನಕ್ಕೆ ಭಾರತ ರಫ್ತು ಮಾಡಿರುವ ಚಹಾ ಪ್ರಮಾಣದಲ್ಲಿ ಶೇ.42ರಷ್ಟು ಏರಿಕೆ ಕಂಡಿದೆ...

ಪಾಕಿಸ್ತಾನಕ್ಕೆ ಚಹಾ ರಫ್ಚು (ಸಾಂದರ್ಭಿಕ ಚಿತ್ರ)
Srinivasa Murthy VN
Updated On : 14 Jan 2016, 10:23 am

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಪಾಕಿಸ್ತಾನಕ್ಕೆ ಭಾರತ ರಫ್ತು ಮಾಡಿರುವ ಚಹಾ ಪ್ರಮಾಣದಲ್ಲಿ ಶೇ.42ರಷ್ಟು ಏರಿಕೆ ಕಂಡಿದೆ.

ಈ ರಫ್ತಿನ ಮೌಲ್ಯ ರು.116.12 ಕೋಟಿಗಳಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಫ್ತಿನ ಮೌಲ್ಯ ರು.81.61 ಕೋಟಿ ಇತ್ತು. ಇದೇ ಸಂದರ್ಭದಲ್ಲಿ ಭಾರತದ ಒಟ್ಟಾರೆ ಚಹಾ ರಫ್ತು ಶೇ.6ರಷ್ಟು  ಏರಿಕೆ ಕಂಡಿದ್ದು ರು.2,746.04ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರು.2,590.08 ಕೋಟಿ ಮೌಲ್ಯದ ಚಹಾ ರಫ್ತು ಮಾಡಲಾಗಿತ್ತು. ಪ್ರಮಾಣ ಲೆಕ್ಕಾಚಾರದಲ್ಲಿ ಪಾಕಿಸ್ತಾನಕ್ಕೆ ಕಳೆದ ವರ್ಷ ಎಂಟು ತಿಂಗಳಲ್ಲಿ 9.65 ದಶಲಕ್ಷ ಕೆ.ಜಿ ಸರಬರಾಜಾಗಿದ್ದರೆ ಈ ವರ್ಷ ಇದೇ ಅವಧಿಯಲ್ಲಿ 11.85 ಕೆ.ಜಿ ಸರಬರಾಜಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement