ಬೆಂಗಳೂರು: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಡಿಸೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಅಂದಾಜಿಗೂ ಮೀರಿ ಲಾಭ ಗಳಿಸಿದೆ.
ಈ ಅವಧಿಯಲ್ಲಿ ಕಂಪನಿ ರು.3,465 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.6.6ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ರು.3,351 ಕೋಟಿ ಗಳಿಸಿತ್ತು. ಆದಾಯ ಗಳಿಕೆ ಪ್ರಮಾಣವೂ ಏರಿಕೆ ಕಂಡಿದೆ. ಈ ಅವಧಿ ಯಲ್ಲಿ ಕಂಪನಿ ರು.15,900 ಕೋಟಿ ಆದಾಯ ಗಳಿಸಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.15,635 ಕೋಟಿಗೆ ಹೋಲಿಸಿದರೆ ಶೇ .1.7ರಷ್ಟು ಏರಿಕೆ ಕಂಡಿದೆ. ಮಾರುಕಟ್ಟೆ ವಿಶ್ಲೇಷಕರಲ್ಲಿ ಆಶ್ಚರ್ಯ ಮೂಡಿಸಿದ ಮತ್ತೊಂದು ವಿಷಯ ಎಂದರೆ ಆರ್ಥಿಕ ಮುನ್ನೋಟವನ್ನು ಹೆಚ್ಚಿಸಿರುಸಿರುವುದು. ಈ ವರ್ಷದಲ್ಲಿ ಕಂಪನಿ ಆದಾಯ ಶೇ.12.8ರಿಂದ 13.2ರಷ್ಟು ಏರಿಕೆ ಕಾಣಬಹುದು ಎಂದು ಕಂಪನಿ ಈ ಹಿಂದೆ ಹೇಳಿತ್ತು. ಆದರೆ ಈಗ ಈ ಅಂದಾಜನ್ನು ಶೇ.16.2ರಿಂದ 16.6ಕ್ಕೆ ಹೆಚ್ಚಿಸಿದೆ.