ಭಾರತದಲ್ಲಿ ಬಂಡವಾಳ ತೊಡಗಿಸಿ: ರಾಜನ್
ಜಾಗತಿಕ ಆರ್ಥಿಕತೆಗೆ ಭಾರತದ ಕೊಡುಗೆ ದಿನೇ ದಿನೇ ಬೆಳೆಯುತ್ತದೆ. ಆಸ್ಟ್ರೇಲಿಯಾದ ಕಂಪನಿಗಳು ಭಾರತದ ಆಕರ್ಷಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದರು...
ಮೆಲ್ಬೋರ್ನ್: ಜಾಗತಿಕ ಆರ್ಥಿಕತೆಗೆ ಭಾರತದ ಕೊಡುಗೆ ದಿನೇ ದಿನೇ ಬೆಳೆಯುತ್ತದೆ. ಆಸ್ಟ್ರೇಲಿಯಾದ ಕಂಪನಿಗಳು ಭಾರತದ ಆಕರ್ಷಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು
ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದರು.
ಆಸ್ಟ್ರೇಲಿಯಾದ ಹೂಡಿಕೆದಾರರು ಕೇಳಿದ ಪ್ರಶ್ನೆಗಳಿಗೆ ಸವಿವರವಾಗಿ ಉತ್ತರಿಸಿದ ರಾಜನ್, ಯಾವುದೇ ಕಂಪನಿ ಅತಿ ಹೆಚ್ಚಿನ ಬೇಡಿಕೆ ಇರುವ ಮಾರುಕಟ್ಟೆಯತ್ತ ನೋಟ ಹರಿಸುವುದಾದರೆ ಭಾರತವನ್ನು ತಪ್ಪಿಸಿಕೊಳ್ಳಬಾರದು. ನಾವು ಅಂದುಕೊಂಡಂತೆ ಯೋಜನೆಗಳು ಜಾರಿಗೊಳಿಸಿದರೆ ಭಾರತ ಅತ್ಯುತ್ತಮ ಮಾರುಕಟ್ಟೆಯಾಗಲಿದೆ ಎಂದು ಹೇಳಿದರು.