ವಿಶ್ವದಲ್ಲಿ 2.36 ಲಕ್ಷ ಶತಕೋಟಿ ಧನಿಕರು..!
ಏಷ್ಯಾ ಪೆಸಿಫಿಕ್ ವಲಯದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ. ಭಾರತದಲ್ಲಿ 2.36 ಲಕ್ಷ ಶತಕೋಟ್ಯಾಧಿಪತಿಗಳಿದ್ದಾರೆ ಎಂದು ಏಷ್ಯಾ ಪೆಸಿಫಿಕ್ 2016 ಸಂಪತ್ತು ವರದಿ ಹೇಳಿದೆ...
ನವದೆಹಲಿ: ಏಷ್ಯಾ ಪೆಸಿಫಿಕ್ ವಲಯದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ. ಭಾರತದಲ್ಲಿ 2.36 ಲಕ್ಷ ಶತಕೋಟ್ಯಾಧಿಪತಿಗಳಿದ್ದಾರೆ ಎಂದು ಏಷ್ಯಾ ಪೆಸಿಫಿಕ್ 2016 ಸಂಪತ್ತು ವರದಿ ಹೇಳಿದೆ.
12.60 ಶತ ಕೋಟ್ಯಾಧಿಪತಿಗಳೊಂದಿಗೆ ಜಪಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹತ್ತು ಲಕ್ಷ ಡಾಲರ್ ಅಥವಾ ಪೌಂಡ್ಗಳಿಗಿಂತ ಹೆಚ್ಚು ಸಂಪತ್ತು ಹೊಂದಿರುವವರನ್ನು ಮಿಲಿಯನೇರ್‍ಗಳ ಗುಂಪಿಗೆ ಸೇರಲಿದ್ದಾರೆ. ಚೀನಾದಲ್ಲಿ 6.54 ಲಕ್ಷ ಮಂದಿ ಇದ್ದು ಎರಡನೇ ಸ್ಥಾನದಲ್ಲಿದ್ದರೆ, 2.90 ಲಕ್ಷ ಮಿಲಿಯನೇರ್‍ಗಳೊಂದಿಗೆ ಆಸ್ಟ್ರೇಲಿಯಾ ಮೂರನೆ ಸ್ಥಾನದಲ್ಲಿದೆ. ಸಿಂಗಾಪುರ 5, ಹಾಂಕಾಂಗ್ 6, ದಕ್ಷಿಣ ಕೊರಿಯಾ 7, ತೈವಾನ್ 8, ನ್ಯೂಜಿಲ್ಯಾಂಡ್ 9 ಮತ್ತು ಇಂಡೋ ನೇಷ್ಯಾ 10ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಖಾಸಗಿ ಸಂಪತ್ತು ಹೊಂದಿರುವವರ ಪಟ್ಟಿಯಲ್ಲೂ ಭಾರತ ಐದನೇ ಸ್ಥಾನದಲ್ಲಿದೆ. ಆದರೆ ತಲಾ ಆದಾಯದಲ್ಲಿ ಭಾರತ ಕೊನೆ ಸ್ಥಾನದಲ್ಲಿದೆ.
ಭಾರತದಲ್ಲಿ 4,365 ಶತಕೋಟಿ ಡಾಲರ್ ಖಾಸಗಿ ಸಂಪತ್ತಿದ್ದು, ಐದನೇ ಸ್ಥಾನದಲ್ಲಿದೆ. ಚೀನಾದಲ್ಲಿ ಈ ಮೊತ್ತ 17,254 ಶತಕೋಟಿ ಡಾಲರ್ಗಳಷ್ಟಿದ್ದು ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ತಲಾ ಆದಾಯ 3,500 ಡಾಲರ್ ಇದ್ದರೆ, ಆಸ್ಟ್ರೇಲಿಯಾದಲ್ಲಿ 2,04,000 ಡಾಲರ್‍ಗಳಿವೆ. ಏಷ್ಯಾ ಪೆಸಿಫಿಕ್ ವಲಯದಲ್ಲಿ ತಲಾ ಆದಾಯದಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಬಡವರು ಮತ್ತು ಶ್ರೀಮಂತರ ನಡುವೆ ಅಸಮಾನತೆ ದಿನೇ ದಿನೇ ಹೆಚ್ಚುತ್ತಿದೆ ಎಂದಿದೆ.