ಮುಂಬೈ: ಇತ್ತೀಚಿನ ದಿನಗಳಲ್ಲಿ ಸತತ ನಷ್ಟ ಕಂಡ ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ಚೇತರಿಕೆ ಕಂಡವು.
ಹೂಡಿಕೆದಾರರು ಲಾಭ ತರುವ ಷೇರುಗಳತ್ತ ನೋಟ ಹರಿಸಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ತುಸು ಚೇತರಿಕೆ ಕಂಡಿದ್ದರಿಂದ ಸೂಚ್ಯಂಕಗಳು 20 ತಿಂಗಳ ಕನಿಷ್ಠದಿಂದ ಮೇಲೆದ್ದಿತು.
ಸೆನ್ಸೆಕ್ಸ್ 291.47 ಅಂಕ ಏರಿಕೆಯೊಂದಿಗೆ 24,479.84ಕ್ಕೆ ತಲುಪಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 84.10 ಏರಿಕೆ ಕಂಡು 7,435.10ಕ್ಕೆ ತಲುಪಿತು. ಬಂಡವಾಳ ಸರಕು, ಮೂಲಸೌಕರ್ಯ, ಬ್ಯಾಂಕ್, ರಿಯಾಲ್ಟಿ ಸೇರಿದಂತೆ ಎಲ್ಲ ವಲಯದ ಸೂಚ್ಯಂಕಗಳು ಗಳಿಕೆ ದಾಖಲಿಸಿದವು. ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಗಳಿಕೆ ಅಂದಾಜು ಮೀರಿದ್ದರಿಂದ ಷೇರು ದರ ಶೇ.2.51ರಷ್ಟು ಏರಿಕೆ ದಾಖಲಿಸಿತು.