ಮುಂಬೈ: ಹೂಡಿಕೆದಾರರ ಸತತ ಮಾರಾಟ ಒತ್ತಡದ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನವೂ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದು, ಬೆಳಗ್ಗೆ 10 ಗಂಟೆಯೊಳಗೆ 200 ಅಂಕಗಳ ಕುಸಿತಕಂಡಿದೆ.
ನಿಫ್ಟಿ ಕೂಡ 32 ಅಂಕಗಳ ಕುಸಿತದೊಂದಿಗೆ 7, 500ಕ್ಕೆ ಕುಸಿದಿದೆ. ಪ್ರಮುಖವಾಗಿ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದ್ದು, ಇನ್ ಫೋಸಿಸ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿದೆ. ಉಳಿದಂತೆ ಬ್ಯಾಕಿಂಗ್ ಮತ್ತು ಔಷಧ ವಲಯಕ್ಕೆ ಹೊಡೆತ ಬಿದ್ದಿದೆ. ಇಂಡಸ್ ಇಂಡ್ ಬ್ಯಾಂಕ್, ಹೆಚ್ ಡಿಎಫ್ ಸಿ, ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಶೇ.0.2ರಷ್ಟು ನಷ್ಟ ಅನುಭವಿಸಿವೆ.
ಇನ್ನು ರುಪಾಯಿ ಮೌಲ್ಯ ಕೂಡ ಇಳಿಕೆಯಾಗಿದ್ದು, ನಿನ್ನೆ ಡಾಲರ್ ಎದುರು 67.21ರಷ್ಟಿದ್ದ ರುಪಾಯಿ ಮೌಲ್ಯ ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಮತ್ತೆ 3 ಪೈಸೆಯಷ್ಟು ಕುಸಿತಕಂಡು 67.24ಕ್ಕೆ ಕುಸಿತ ಕಂಡಿದೆ.