ಸಂಗ್ರಹ ಚಿತ್ರ 
ವಾಣಿಜ್ಯ

ನೋಟ್ ಬ್ಯಾನ್ ಎಫೆಕ್ಟ್: ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ

500 ಮತ್ತು 1000 ರು.ಗಳ ನೋಟ್ ಗಳ ಮೇಲಿನ ನಿಷೇಧದ ಪರಿಣಾಮ ಚಿನ್ನ ಬೆಳ್ಳಿ ಮಾರಾಟದ ಮೇಲೂ ಭಾರಿ ಪರಿಣಾಮ ಬೀರಿದ್ದು, ನೋಟ್ ಗಳ ಮೇಲೆ ನಿಷೇಧ ಹೇರಿದ ಕೆಲವೇ ಗಂಟೆಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಬರೊಬ್ಬರಿ 2000 ರು ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಮುಂಬೈ: 500 ಮತ್ತು 1000 ರು.ಗಳ ನೋಟ್ ಗಳ ಮೇಲಿನ ನಿಷೇಧದ ಪರಿಣಾಮ ಚಿನ್ನ ಬೆಳ್ಳಿ ಮಾರಾಟದ ಮೇಲೂ ಭಾರಿ ಪರಿಣಾಮ ಬೀರಿದ್ದು, ನೋಟ್ ಗಳ ಮೇಲೆ ನಿಷೇಧ ಹೇರಿದ ಕೆಲವೇ ಗಂಟೆಗಳಲ್ಲಿ ಬೆಳ್ಳಿ ಬೆಲೆಯಲ್ಲಿ  ಬರೊಬ್ಬರಿ 2000 ರು ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ಮುಖಬೆಲೆ ನೋಟ್ ಗಳ ಮೇಲೆ ನಿಷೇಧ ಹೇರುತ್ತಲೇ ಇತ್ತ ಷೇರುಮಾರುಕಟ್ಟೆ ಹಾಗೂ ಚಿನಿವಾರ ಪೇಟೆಯಲ್ಲಿ ತಲ್ಲಣ ಶುರುವಾಗಿದ್ದು, ಅದರಂತೆ ಬೆಳ್ಳಿ ಬೆಲೆಯಲ್ಲಿ  ಭಾರಿ ಪ್ರಮಾಣದ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ 1 ಕೆಜಿ ಬೆಳ್ಳಿ ಬೆಲೆಯಲ್ಲಿ ಶೇ.35ರಷ್ಟು ಏರಿಕೆಯಾಗಿದ್ದು, 2 ಸಾವಿರ ರು ಏರಿಕೆ ಮೂಲಕ 43.500 (ಬೆಂಗಳೂರು ಬೆಲೆ ಮಾತ್ರ)ಕ್ಕೇರಿಕೆಯಾಗಿದೆ.   ಚಿನ್ನದಬೆಲೆಯಲ್ಲೂ ಕೂಡ ಶೇ.35ರಷ್ಟು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಚಿನ್ನದರ ಪ್ರತೀ 10 ಗ್ರಾಂ ಗೆ 31, 016ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಚಿನ್ನದ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಕುಸಿತವಾಗಿತ್ತಾದರೂ, ಭಾರತದಲ್ಲಿ 500 ರು ಮತ್ತು 1000 ರು.ಗಳ ನೋಟ್ ಗಳ ಮೇಲೆ ನಿಷೇಧ ಹೇರಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.  ಇದು ಮಾತ್ರವಲ್ಲದೇ ಅತ್ತ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕೂಡ ಬೆಲೆ ಏರಿಕೆ ಪರಿಣಾಮ ಬೀರುತ್ತಿದ್ದು, ಹಿಲರಿ ಹಾಗೂ ಟ್ರಂಪ್ ನಡುವಿನ ತೀವ್ರ ಪೈಪೋಟಿ ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್