ಮುಂಬೈ: ನೋಟು ನಿಷೇಧ ಬಳಿಕ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಷೇರುಮಾರುಕಟ್ಟೆ ಅಲ್ಪ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 65.02ಅಂಕಗಳ ಏರಿಕೆ ಕಂಡಿದೆ.
65 ಅಂಕಗಳ ಏರಿಕೆಯೊಂದಿಗೆ ಬಿಎಸ್ ಇ ಸೆನ್ಸೆಕ್ಸ್ 26,381.36 ಅಂಕಗಳಿಗೇರಿದ್ದು, ನಿಫ್ಟಿ ಕೂಡ 22.55 ಅಂಕಗಳ ಏರಿಕೆಯೊಂದಿಗೆ 8,136.85 ಅಂಕಗಳಿಗೇರಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಲಾಭಾಂಶಗಳಿಕೆಯಾಗಿದ್ದು, ನೈಸರ್ಗಿಕ ಅನಿಲ, ಮೂಲಭೂತ ಸೌಕರ್ಯ ಹಾಗೂ ರಿಯಾಲಿಟಿ ಕ್ಷೇತ್ರದ ಷೇರುಗಳು ಕೂಡ ಲಾಭಾಂಶ ಕಂಡಿವೆ.
ಆದರೆ ಬ್ಯಾಂಕಿಂಗ್ ಕ್ಷೇತ್ರ, ಗ್ರಾಹಕ ವಸ್ತುಗಳು ಹಾಗೂ ಐಟಿ ಕ್ಷೇತ್ರದ ಷೇರುಗಳನ್ನು ಕೊಳ್ಳುವರಿಲ್ಲದೇ ಮಂಕಾಗಿದ್ದವು. ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆ ತನ್ನ ಷೇರುಗಳ ಮೌಲ್ಯದಲ್ಲಿ ಶೇ.3.9ರಷ್ಟು ಏರಿಕೆ ಮಾಡಿಕೊಂಡಿದ್ದು, ಪವರ್ ಗ್ರಿಡ್ ಸಂಸ್ಥೆಯ ಷೇರುಮೌಲ್ಯದಲ್ಲಿ ಶೇ.2.92ರಷ್ಟು ಏರಿಕೆ ಕಂಡುಬಂದಿದೆ. ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯ ಷೇರುಮೌಲ್ಯದಲ್ಲಿ 2.17ರಷ್ಟು ಮತ್ತು ಎನ್ ಟಿಪಿಸಿ ಷೇರುಮೌಲ್ಯದಲ್ಲಿ 1.86ರಷ್ಟು ಏರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ.