ಚೀನಾ ಸರಕು ಬಹಿಷ್ಕಾರ ಅಭಿಯಾನದ ನಡುವೆ ಚೀನಾ ಹೂಡಿಕೆದಾರರರನ್ನು ಸೆಳೆಯುತ್ತಿರುವ ಗುಜರಾತ್ 
ವಾಣಿಜ್ಯ

ಚೀನಾ ಸರಕು ಬಹಿಷ್ಕಾರ ಅಭಿಯಾನದ ನಡುವೆ ಚೀನಾ ಹೂಡಿಕೆದಾರರರನ್ನು ಸೆಳೆಯುತ್ತಿರುವ ಗುಜರಾತ್

ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನ ಪ್ರಾರಂಭವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಗುಜರಾತ್ ನಲ್ಲಿ ಚೀನಾ ಹೂಡಿಕೆದಾರರನ್ನು ಸೆಳೆಯುವ ಯತ್ನ ನಡೆಯುತ್ತಿದೆ.

ಗಾಂಧಿನಗರ: ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನ ಪ್ರಾರಂಭವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಗುಜರಾತ್ ನಲ್ಲಿ ಚೀನಾ ಹೂಡಿಕೆದಾರರನ್ನು ಸೆಳೆಯುವ ಯತ್ನ ನಡೆಯುತ್ತಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ವದೇಶೀ ವಸ್ತುಗಳನ್ನು ಉಪಯೋಗಿಸುವಂತೆ ಕರೆ ನೀಡಿದ್ದರೂ ಸಹ ವೈಬ್ರಂಟ್ ಗುಜರಾತ್ ಶೃಂಗಸಭೆಗಾಗಿ ಸರ್ಕಾರದ ಹಿರಿಯ ಅಧಿಕಾರಿಗಳು ವೈಬ್ರಂಟ್ ಗುಜರಾತ್ ಶೃಂಗಸಭೆಗಾಗಿ ಹೂಡಿಕೆದಾರರನ್ನು ಸೆಳೆಯಲು ಚೀನಾಗೆ ತೆರಳಿದ್ದಾರೆ. ಭಾರತ-ಚೀನಾ- ಹಾಂಕ್ ಕಾಂಗ್ ನಡುವಿನ ವ್ಯಾವಹಾರಿಕ ಸಂಬಂಧವನ್ನು ಬಲಪಡಿಸುವಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸುತ್ತದೆ.ಈ ಹಿನ್ನೆಲೆಯಲ್ಲಿ ಗುಜರಾತ್ ನ ಅಧಿಕಾರಿಗಳು ಚೀನಾಗೆ ತೆರಳಿ ಹೂಡಿಕೆದಾರರೊಂದಿಗೆ ಮಾತನಾಡಿದ್ದಾರೆ ಎಂದು ಗುಜರಾತ್ ನ ಕೃಷಿ ಹಾಗು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
2017 ರ ಜನವರಿಯಲ್ಲಿ ವೈಬ್ರಂಟ್ ಗುಜರಾತ್ ಶೃಂಗಸಭೆ ನಡೆಯಲಿದೆ. ಸ್ಥಳೀಯ ವ್ಯಾಪಾರ ಸಮುದಾಯ ಚೀನಾ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರೂ ಮತ್ತೊಂದೆಡೆ ಸರ್ಕಾರದ ಪ್ರತಿನಿಧಿಗಳೇ ಚೀನಾಗೆ ತೆರಳಿ ಚೀನಾ ಹೂಡಿಕೆದಾರರನ್ನು ಭಾರತದಲ್ಲಿ ಹೂಡಿಕೆ ಮಾಡುವಂತೆ ಮಾತುಕತೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಎಂದ Kiren Rijiju, ವಿಪಕ್ಷಗಳ 'ಬಂಡಾಯ' ಪ್ರತಿಧ್ವನಿಸುವ ಸಾಧ್ಯತೆ!

ಬಲೂಚಿಗರಿಂದ ಆತ್ಮಾಹುತಿ ದಾಳಿ: 30ಕ್ಕೂ ಹೆಚ್ಚು Pakistan ಸೈನಿಕರು ಸಾವು, ಸ್ಫೋಟದ ವಿಡಿಯೋ ಬಿಡುಗಡೆ ಮಾಡಿದ BLA

ಇದು ನಿಜಕ್ಕೂ 'ಅಸಹ್ಯಕರ'; ಹೀಗೆ ಆಗುತ್ತಿರುವುದು ಮೂರನೇ ಬಾರಿ: ಆಕ್ರೋಶ ಹೊರಹಾಕಿದ ನಟಿ ತ್ರಿಶಾ!

ರಾಜ್ಯದಲ್ಲಿ SIR ಜಟಾಪಟಿ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು; ಸರ್ಕಾರದ ವಿರುದ್ದ ಗಂಭೀರ ಆರೋಪ

ಮೈಸೂರು: ಕಾಡಾನೆ ಕಾರ್ಯಾಚರಣೆಗಳಲ್ಲಿ 'ಅಂಬಾರಿ ಆನೆ' ಅಭಿಮನ್ಯುವಿನ ತಾಕತ್ತಾಗಿದ್ದ ಎಡಭಾಗದ ದಂತವೇ ಮುರಿತ!