ಸೆನ್ಸೆಕ್ಸ್ (ಸಂಗ್ರಹ ಚಿತ್ರ) 
ವಾಣಿಜ್ಯ

ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ; 200 ಅಂಕ ಏರಿಕೆ ಕಂಡ ಸೆನ್ಸೆಕ್ಸ್

ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.

ಮುಂಬೈ: ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.

ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಕ್ವಾರ್ಟರ್ ವರದಿಯಲ್ಲಿನ ಲಾಭಾಂಶದ ಬೆಂಬಲದಿಂದಾಗಿ ಸೆನ್ಸೆಕ್ಸ್  ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕಗಳ ಏರಿಕೆಯೊಂದಿಗೆ 28,126.21 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ ಕೂಡ 8,700ರ ಗಡಿ  ದಾಟಿ 54 ಅಂಕಗಳ ಏರಿಕೆಯೊಂದಿಗೆ 8, 713 ಅಂಕಗಳಿಗೇರಿದೆ.

ಪ್ರಮುಖವಾಗಿ ಬ್ಯಾಕಿಂಗ್ ಕ್ಷೇತ್ರದ ಷೇರುಗಳ ಹೆಚ್ಚಿನ ಲಾಭಾಂಶ ಕಂಡುಕೊಂಡಿದ್ದು, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ, ಒಎನ್ ಜಿಸಿ ಹಾಗೂ ಜಿಎಐಎಲ್ ಇಂಡಿಯಾ ಸಂಸ್ಥೆಯ ಷೇರುಗಳ  ಮೌಲ್ಯ ಹೆಚ್ಚಾಗಿದೆ. ಆದರೆ ವರ್ಷಾಂತ್ಯದ ಮಾರಾಟ ಒತ್ತಡದಿಂದಾಗಿ ಇಂಧನ, ಐಟಿ ಹಾಗೂ ಔಷಧ ವಲಯಗಳ ಷೇರುಗಳು ಮೌಲ್ಯ ಕಳೆದುಕೊಂಡಿವೆ.=

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ