ಸಾಂದರ್ಭಿಕ ಚಿತ್ರ 
ವಾಣಿಜ್ಯ

ಐಬಿಎಂ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿ ಕರಣ್ ಬಜ್ವಾ ನೇಮಕ

ಕರಣ್ ಬಜ್ವಾ ಅವರನ್ನು ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ...

ನವದೆಹಲಿ: ಕರಣ್ ಬಜ್ವಾ ಅವರನ್ನು ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ ವಿಶ್ವದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಐಬಿಎಂ ಬುಧವಾರ ತಿಳಿಸಿದೆ.
ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವನಿತಾ ನಾರಾಯಣ್ ಅವರಿಗೆ ಐಬಿಎಂ ಇಂಡಿಯಾ ಅಧ್ಯಕ್ಷರನ್ನಾಗಿ ಮುಂಬಡ್ತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಬಜ್ವಾ ಅವರನ್ನು ನೇಮಕ ಮಾಡಲಾಗಿದೆ. ಬಜ್ವಾ ಅವರು ಕಳೆದ ವರ್ಷ ಏಷ್ಯಾ-ಪೆಸಿಫಿಕ್ ಪ್ರದೇಶದ ತಂತ್ರ ಮತ್ತು ರೂಪಾಂತರ ಕಾರ್ಯನಿರ್ವಾಹಕರಾಗಿ ಐಬಿಎಂ ಸೇರಿಕೊಂಡಿದ್ದರು. ಇದಕ್ಕು ಮುನ್ನ ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಮಾರುಕಟ್ಟೆಯಲ್ಲಿ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ನಿರಂತರವಾಗಿ ಪುನರ್ ಶೋಧನೆ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಮಾಡಲಾಗುವುದು. ಐಬಿಎಂ ಇಂದು ಒಳ್ಳೆಯ ಸ್ಥಾನದಲ್ಲಿದ್ದು, ಡಿಜಿಟಲ್ ರೂಪಾಂತರ ಪ್ರಯಾಣಕ್ಕೆ ಮತ್ತು ವ್ಯವಹಾರಕ್ಕೆ ಸಹಕರಿಸಲಿದೆ ಎಂದು ಬಜ್ವಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

Israeli Strike: ಯೆಮೆನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ, ಇರಾನ್ ಬೆಂಬಲಿತ ಹೌತಿ ಪ್ರಧಾನಿ, ಹಲವು ಸಚಿವರ ಹತ್ಯೆ!

ಸಾಮರಸ್ಯದ ಸಂದೇಶ ಸಾರಿದ ಗಣೇಶ: ಮುಸ್ಲಿಂ ಯುವಕರಿಂದ ಹಬ್ಬ ಆಚರಣೆ; ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪನೆ

SCROLL FOR NEXT