ಸಾಂದರ್ಭಿಕ ಚಿತ್ರ 
ವಾಣಿಜ್ಯ

2016,ಏ. 1ರಿಂದ ನ. 9ರವರೆಗಿನ ಉಳಿತಾಯ ಠೇವಣಿ ವರದಿ ನೀಡಲು ಐಟಿ ಇಲಾಖೆ ಬ್ಯಾಂಕು, ಅಂಚೆ ಕಚೇರಿಗಳಿಗೆ ಸೂಚನೆ

2016 ಏಪ್ರಿಲ್ 1ರಿಂದ ನವೆಂಬರ್ 9ರವರೆಗೆ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಠೇವಣಿಯಾಗಿರುವ ಹಣದ ಬಗ್ಗೆ ಲೆಕ್ಕ...

ನವದೆಹಲಿ: 2016 ಏಪ್ರಿಲ್ 1ರಿಂದ ನವೆಂಬರ್ 9ರವರೆಗೆ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಠೇವಣಿಯಾಗಿರುವ ಹಣದ ಬಗ್ಗೆ ಲೆಕ್ಕ ನೀಡುವಂತೆ ಆದಾಯ ತೆರಿಗೆ ಇಲಾಖೆ ಬ್ಯಾಂಕುಗಳಿಗೆ ಸೂಚಿಸಿದೆ.
ನವೆಂಬರ್ 8ರಂದು ಅಧಿಕ ಮೌಲ್ಯದ ನೋಟುಗಳ ಚಲಾವಣೆ ಹಿಂತೆಗೆತದ ನಂತರ ಪ್ರತಿ ತಿಂಗಳು ಬ್ಯಾಂಕುಗಳಲ್ಲಿ ಆದ ಹಣದ ವಹಿವಾಟುಗಳನ್ನು ವಿಶ್ಲೇಷಿಸಲು ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
ಅಲ್ಲದೆ ಬ್ಯಾಂಕುಗಳಿಗೆ ಪ್ಯಾನ್ ಸಂಖ್ಯೆ ಒದಗಿಸದ ಅಥವಾ ಖಾತೆ ತೆರೆಯುವ ಸಂದರ್ಭದಲ್ಲಿ ಅರ್ಜಿ ಸಂಖ್ಯೆ 60 ನೀಡದ ಖಾತೆದಾರರು ಈ ವರ್ಷ ಫೆಬ್ರವರಿ 28ರೊಳಗೆ ನೀಡುವಂತೆ ಕೂಡ ಬ್ಯಾಂಕುಗಳು ಗ್ರಾಹಕರಿಗೆ ನಿರ್ದೇಶನ ನೀಡಬೇಕೆಂದು ಹೇಳಿದೆ.
ಅಧಿಸೂಚನೆ ಪ್ರಕಾರ, ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಕಳೆದ ವರ್ಷ ಏಪ್ರಿಲ್ 1ರಿಂದ ನವೆಂಬರ್ 9ರವರೆಗೆ ಮಾಡಿದ ಎಲ್ಲಾ ಠೇವಣಿ ಸಂಗ್ರಹದ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕು.
ಅಲ್ಲದೆ ಠೇವಣಿದಾರರಿಂದ ಪಾನ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆ 60ರಡಿ ತೆರೆದ ಖಾತೆಗಳ ವಿವರ, ವಹಿವಾಟುಗಳ ವಿವರಗಳನ್ನು ಐಟಿ ಕಾಯ್ದೆ 114ಬಿಯಡಿ ಒದಗಿಸಬೇಕೆಂದು ಬ್ಯಾಂಕುಗಳಿಗೆ ಸೂಚಿಸಿದೆ. 114ಬಿ ಅನೇಕ ವಹಿವಾಟುಗಳನ್ನು ಪಟ್ಟಿ ಮಾಡುತ್ತಿದ್ದು ಅದಕ್ಕೆ ಪಾನ್ ಸಂಖ್ಯೆ ಕಡ್ಡಾಯವಾಗಿರುತ್ತದೆ.
ನೋಟುಗಳ ಚಲಾವಣೆ ಹಿಂತೆಗೆತದ ನಂತರ ಆದಾಯ ತೆರಿಗೆ ಇಲಾಖೆ ಬ್ಯಾಂಕು ಮತ್ತು ಅಂಚೆ ಕಚೇರಿಗಳಿಗೆ ನಿರ್ದೇಶನ ನೀಡಿ ಉಳಿತಾಯ ಖಾತೆಗಳಲ್ಲಿ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿಯಿಟ್ಟರೆ ಮತ್ತು ಪ್ರಚಲಿತ ಖಾತೆಯಲ್ಲಿ 12.50 ಲಕ್ಷಕ್ಕಿಂತ ಹೆಚ್ಚು ಹಣವನ್ನು ನವೆಂಬರ್ 10, 2016ರಿಂದ ಡಿಸೆಂಬರ್ 30ರೊಳಗೆ ಹೂಡಿಕೆ ಮಾಡಿದವರ ವಿವರ ಮತ್ತು ದಿನಕ್ಕೆ 50,000ಕ್ಕಿಂತ ಹೆಚ್ಚು ಹೂಡಿಕೆ ಮಾಡಿದವರ ವಿವರ ನೀಡಬೇಕೆಂದು ಆದೇಶ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!