ವಾಣಿಜ್ಯ

ಸಣ್ಣ ಹೂಡಿಕೆದಾರರಿಗೆ ಹೊಡೆತ: ಉಳಿತಾಯ ಯೋಜನೆಗಳ ಬಡ್ಡಿದರ ಕಡಿತಗೊಳಿಸಿದ ಸರ್ಕಾರ

Srinivas Rao BV
ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಕಿಸಾನ್ ವಿಕಾಸ್ ಪತ್ರ ಹಾಗೂ ಸುಕನ್ಯ ಸಂವೃದ್ಧಿಯಂತಹ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇ.0.1 ರಷ್ಟು ಕಡಿತಗೊಳಿಸಿದ್ದು, ಸಣ್ಣ ಹೂಡಿಕೆದಾರರಿಗೆ ಹೊಡೆತ ಬಿದ್ದಂತಾಗಿದೆ. 
ಶೇ.4 ರಷ್ಟಿದ್ದ ಉಳಿತಾಯ ಠೇವಣಿಗಳ ಮೇಲಿನ ವಾರ್ಷಿಕ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಕಳೆದ ವರ್ಷದ ಏಪ್ರಿಲ್ ನಿಂದ ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಅದರಂತೆಯೇ ಈಗಲೂ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಪಿಪಿಎಫ್ ಉಳಿತಾಯ ಯೋಜನೆಯಡಿಯಲ್ಲಿ ವಾರ್ಷಿಕ ಬಡ್ಡಿ ದರ ಶೇ.7.8 ರಷ್ಟಾಗಲಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಹೇಳಿದೆ. 
ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿನ ಹೂಡಿಕೆ ಶೇ.7.5 ರಷ್ಟು ಬಡ್ಡಿ ನೀಡಲಿದ್ದು, 115 ತಿಂಗಳಲ್ಲಿ ಮೆಚ್ಯೂರ್ ಆಗಲಿದೆ. ಪ್ರಸ್ತುತ ಶೇ.8.4 ರಷ್ಟು ಬಡ್ಡಿ ದರ ಹೊಂದಿರುವ ಸುಕನ್ಯ ಸಂವೃದ್ಧಿ ಯೋಜನೆಯ ಬಡ್ಡಿ ದರ ಶೇ.8.3 ರಷ್ಟಾಗಲಿದೆ. 
SCROLL FOR NEXT