ವಾಣಿಜ್ಯ

ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಗೆ ಜೀವ ಬೆದರಿಕೆ; ಆರೋಪಿ ನಾಗ್ಪುರದಲ್ಲಿ ಬಂಧನ

Sumana Upadhyaya
ಮುಂಬೈ: ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯಿಂದ ಕೆಳಗಿಳಿಯುವಂತೆ ಊರ್ಜಿತ್ ಪಟೇಲ್ ಅವರಿಗೆ ಇಮೇಲ್ ನಲ್ಲಿ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೈಭವ್ ಬದ್ದಲ್ ವಾರ್ ಎಂದು ಗುರುತಿಸಲಾಗಿದೆ.
ಫೆಬ್ರವರಿ 23ರಂದು ಗವರ್ನರ್ ಅವರ ಇಮೇಲ್ ಗೆ ಬೆದರಿಕೆ ಕರೆ ಬಂದಿತ್ತು. ಅದರಲ್ಲಿ ಗವರ್ನರ್ ಹುದ್ದೆಯನ್ನು ತೊರೆಯದಿದ್ದರೆ ಊರ್ಜಿತ್ ಪಟೇಲ್ ಮತ್ತು ಅವರ ಕುಟುಂಬದವರಿಗೆ ತೊಂದರೆ ನೀಡುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಪಟೇಲ್ ಇಮೇಲ್ ನ್ನು ಆರ್ ಬಿಐ ಹಿರಿಯ ಅಧಿಕಾರಿಗೆ ಫಾರ್ವರ್ಡ್ ಮಾಡಿದರು. ಅವರು ಮುಂಬೈ ಸೈಬರ್ ಅಪರಾಧ ವಿಭಾಗದ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರು. ತನಿಖೆ ವೇಳೆ, ನಾಗ್ಪುರದ ಸೈಬರ್ ಕೆಫೆಯೊಂದರಿಂದ ಇಮೇಲ್ ಬಂದಿರುವುದು ಎಂದು ಗೊತ್ತಾಯಿತು. 
ಆಗ ಮುಂಬೈ ಅಪರಾಧ ವಿಭಾಗದ ಪೊಲೀಸರ ತಂಡ ನಾಗ್ಪುರಕ್ಕೆ ತೆರಳಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದರು ಎಂದು ಸೈಬರ್ ಪೊಲೀಸ್ ಘಟಕದ ಸಹಾಯಕ ಆಯುಕ್ತ ಅಖಿಲೇಶ್ ಸಿಂಗ್ ತಿಳಿಸಿದ್ದಾರೆ.
ಆರೋಪಿ ತಾನೇ ಇಮೇಲ್ ಕಳುಹಿಸಿದ್ದೆಂದು ತಪ್ಪೊಪ್ಪಿಕೊಂಡಿದ್ದಾನೆ. ವಿದೇಶದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿ ಬಂದಿದ್ದ ಈತ ಕೆಲಸ ಸಿಗದೆ ಒತ್ತಡಕ್ಕೆ ಒಳಗಾಗಿದ್ದ. ಭಾರತೀಯ ದಂಡ ಸಂಹಿತೆ ಸೆಕ್ಷನ್ 506(2)ರ ಪ್ರಕಾರ ಈತನ ವಿರುದ್ಧ ಅಪರಾಧ ಕೇಸು ದಾಖಲಿಸಲಾಗಿದೆ.
SCROLL FOR NEXT