ನವದೆಹಲಿ: 2017 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.2 ರಷ್ಟಾಗಲಿದ್ದು, 2018 ನೇ ಸಾಲಿನಲ್ಲಿ ಶೇ.7.7 ರಷ್ಟಾಗಲಿದೆ ಎಂದು ಕೇಂದ್ರ ಹಣ ಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಎನ್ ಬಿಡಿಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅರುಣ್ ಜೇಟ್ಲಿ, ಉದಯೋನ್ಮುಖ ಮಾರುಕಟ್ಟೆಗಳು ಆರ್ಥಿಕ ರಕ್ಷಣಾ ಮತ್ತು ಹೆಚ್ಚಿದ ಒತ್ತಡವನ್ನು ನಿರ್ವಹಿಸುವ ನೀತಿಗಳ ವಿಷಯದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಈ ನಡುವೆ ಜಾಗತಿಕ ಆರ್ಥಿಕ ಬೆಳವಣಿಗೆಯೂ ಸಹ ಏರುಗತಿಯಲ್ಲಿದ್ದು, 2017-18 ನೇ ಸಾಲಿನ ಆರ್ಥಿಕ ವರ್ಷಕ್ಕೆ ಮತ್ತಷ್ಟು ಚೇತರಿಕೆ ಕಾಣಲಿದೆ, ಈ ವೇಳೆಯಲ್ಲಿ ಭಾರತದ ಆರ್ಥಿಕತೆ ಶೇ.7.7 ರಷ್ಟು ಬೆಳವಣಿಗೆಯಾಗಲಿದೆ ಎಂದು ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಯೋಜನೆಗಳಿಗಾಗಿ ಎನ್ ಬಿಡಿಯಿಂದ ಭಾರತ 2 ಬಿಲಿಯನ್ ಲೋನ್ ನ್ನು ಕೇಳಿದ್ದು, ಭಾರತಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಮೂಲಸೌಕರ್ಯ ಹೂಡಿಕೆ ಅಗತ್ಯವಿದ್ದು ಮುಂದಿನ 5 ವರ್ಷಗಳಲ್ಲಿ 646 ಬಿಲಿಯನ್ ಡಾಲರ್ ನಷ್ಟು ಫಂಡಿಂಗ್ ಅಗತ್ಯವಿದೆ ಎಂದು ಹೇಳಿದ್ದಾರೆ.