ವಾಣಿಜ್ಯ

ಮೂಡೀಸ್ ರೇಟಿಂಗ್ ದೇಶದ ಆರ್ಥಿಕ ಪ್ರಗತಿಗೆ ದೃಢೀಕರಣ ನೀಡಿದೆ: ಸಚಿವ ಅರುಣ್ ಜೇಟ್ಲಿ

Raghavendra Adiga
ನವದೆಹಲಿ: "ಮೂಡಿಯ ಸುಧಾರಿತ ಕ್ರೆಡಿಟ್ ರೇಟಿಂಗ್ ಕಳೆದ 3-4 ವರ್ಷಗಳಲ್ಲಿ ಭಾರತದಲ್ಲಿ ನಡೆದಿರುವ ಸುಧಾರಣೆಯ ಪ್ರಕ್ರಿಯೆಯ ಗುರುತಿಸುವಿಕೆ ಮತ್ತು ದೃಢೀಕರಣ ಆಗಿದೆ" ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೇಟ್ಲಿ "ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ನೀತಿಯಿಂದ ರಾಷ್ಟ್ರವು ಅಲ್ಪಾವಧಿಯಲ್ಲಿ ಪ್ರಗತಿ ದಾಖಲಿಸಿರುವುದು ಇದರಿಂದ ದೃಢಪಟ್ಟಿದೆ, 2004 ರಿಂದ ಈಚೆಗೆ ಇದೇ ಮೊದಲ ಬಾರಿಗೆ ಭಾರತದ ರೇಟಿಂಗ್ ನ್ನು ಏರಿಸಿರುವ ಮೂಡಿ ನಡೆ ಸ್ವಾಗತಾರ್ಹ" ಎಂದು ಜೇಟ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
"ಇದು ಸ್ವಾಗತಾರ್ಹ ಬೆಳವಣಿಗೆ,ಇದು ಸರ್ಕಾರ ಕೈಗೊಂದ ಪ್ರಮುಖ ನಿಲುವುಗಳಾದ ಜಿ ಎಸ್ ಟಿ ಮತ್ತಿತರೆ ಕ್ರಮಗಳನ್ನು ಗಮನದಲ್ಲಿಇರಿಸಿಕೊಂಡಿರುವುದು ಸ್ಪಷ್ಟವಾಗಿದೆ." ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ  ಸುಬ್ರಹ್ಮಣ್ಯನ್ ಹೇಳಿದರು.
ಜಾಗತಿಕ ಮಟ್ಟದ ರೇಟಿಂಗ್‌ ಏಜೆನ್ಸಿ ‘ಮೂಡೀಸ್‌’ ಭಾರತದ ದೇಶೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು ರೇಟಿಂಗ್ ಅನ್ನು ಉನ್ನತೀಕರಿಸಿದೆ. ಭಾರತಕ್ಕೆ ‘ಬಿಎಎ2’ ರೇಟಿಂಗ್ ನೀಡಿರುವ ಮೂಡೀಸ್ 13 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ರಾಷ್ಟ್ರದ ರೇಟಿಂಗ್ ನ್ನು ಉನ್ನತೀಕರಣಗೊಳಿಸಿದೆ.
ನೋಟು ರದ್ಧತಿ, ಜಿಎಸ್‌ಟಿ ಜಾರಿ ಸೇರಿದಂತೆ ರಾಷ್ಟ್ರದಲ್ಲಿ ಇತ್ತೀಚೆಗೆ ಕೈಗೊಂಡ ಪ್ರಮುಖ ಆರ್ಥಿಕ ಸುಧಾರಣೆಗಳು ದೇಶದ ಆರ್ಥಿಕ ಪ್ರಗತಿಗೆ ಸಕಾರಾತ್ಮಕ ಕೊಡುಗೆ ನೀಡಿದೆ ಎಂದು ಮೂಡೀಸ್ ಹೇಳಿಕೆಯಲ್ಲಿ ತಿಳಿಸಿದೆ.
ಶೇರು ಮಾರುಕಟ್ಟೆ ಏರುಗತಿ
ಮೂಡೀಸ್ ರೇಟಿಂಗ್ ಉನ್ನತೀಕರಣದ ಪರಿಣಾಮ ಮುಂಬೈ ಷೇರು ಮಾರುಕಟ್ಟೆ ಮೇಲೆಯೂ ಸಕಾರಆತ್ಮಕವಾಗಿ ಪರಿನಾಮ ಬೀರಿದ್ದು ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 414 ಅಂಶಗಳಷ್ಟು ಏರಿಕೆ ಕಂಡಿದ್ದು 33,521 ಗೆ ತಲುಪಿದೆ.
SCROLL FOR NEXT