ಮಾರುಕಟ್ಟೆ ವಹಿವಾಟು : ಸಗಟು ಹಣದುಬ್ಬರ ಶೇ. 2.6 ಕ್ಕೆ ಇಳಿಕೆ
ನವದೆಹಲಿ: ಸಪ್ಟೆಂಬರ್ ತಿಂಗಳಿನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ. 2.60 ಕ್ಕೆ ಕುಸಿದಿದೆ. ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆಗಳು ಇಳಿಕೆ ಆಗಿವೆ.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರದಲ್ಲಿ ಆ.2017 ರಲ್ಲಿ ಹಣದುಬ್ಬರವು ನಾಲ್ಕು ತಿಂಗಳ ಗರಿಷ್ಠ ಎಂದರೆ ಶೇ. 3.24 ಕ್ಕೆ ತಲುಪಿತ್ತು. ಸೆ.2016ರಲ್ಲಿ ಇದು ಶೇ. 1.36 ರಷ್ಟಿತ್ತು.
ಇಂದು ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಸೆಪ್ಟೆಂಬರ್ ನಲ್ಲಿ ಆಹಾರ ಹಣದುಬ್ಬರ ಶೇ.2.04 ಕ್ಕೆ ಇಳಿಕೆ ಆಗಿದೆ. ಆಗಸ್ಟ್ ನಲ್ಲಿ ಆಹಾರ ಹಣದುಬ್ಬರವು ಶೇ.5.75 ರಷ್ಟಿತ್ತು..
ತರಕಾರಿ ಬೆಲೆಗಳ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ ಶೇ .15.48 ಕ್ಕೆ ಇಳಿದಿದೆ. ಕಳೆದ ತಿಂಗಳು 44.91 ರಷ್ಟು ದಾಖಲಾಗಿತ್ತು.. ಆದರೆ ಈರುಳ್ಳಿ ಬೆಲೆ ಸೆಪ್ಟೆಂಬರ್ ನಲ್ಲಿ ಶೇ.79.78 ರಷ್ಟು ಏರಿಕೆ ಕಂಡಿದೆ. ಮೊಟ್ಟೆ, ಮಾಂಸ ಮತ್ತು ಮೀನುಗಳ ಬೆಲೆ ಏರಿಕೆ ದರವು ಶೇ.5.47 ರಷ್ಟು ಇದೆ.
ಇದೇ ವೇಳೆ ತಯಾರಿಕಾ ಉತ್ಪನ್ನಗಳಲ್ಲಿ ಹಣದುಬ್ಬರ ಶೇ. 2.72 ಕ್ಕೆ ಏರಿಕೆ ಕಂಡಿದ್ದು , ಆಗಸ್ಟ್ ನಲ್ಲಿ 2.45 ರಷ್ಟು ದಾಖಲಾಗಿತ್ತು.. ಇಂಧನ ಮತ್ತು ವಿದ್ಯುತ್, ಹಣದುಬ್ಬರವು ಆಗಸ್ಟ್ ನಲ್ಲಿ ಶೇ 9.99 ಇದ್ದದ್ದು ಶೇ. 9.01 ಕ್ಕೆ ಇಳಿದಿದೆ. ಬೇಳೆಕಾಳುಗಳು ಹಣದುಬ್ಬರ ಇಳಿಕೆಯಾಗಿದ್ದು ಶೇ 24.26 ಕ್ಕೆ ತಲುಪಿದೆ. ಇದೇ ರೀತಿ ಆಲೂಗೆಡ್ಡೆ ಶೇ.46.52 ಮತ್ತು ಗೋಧಿ ಶೇ. 1.71 ರಲ್ಲಿದೆ.