ವಾಣಿಜ್ಯ

10 ತಿಂಗಳಲ್ಲಿ ಮೊದಲ ಬಾರಿಗೆ ಸಾಲ ದರಗಳನ್ನು ಕಡಿತಗೊಳಿಸಿದ ಎಸ್‌ಬಿಐ

Vishwanath S
ನವದೆಹಲಿ: ದೇಶದ ಅಗ್ರ ಸಾಲದಾತರ ಆಸ್ತಿಪಾಸ್ತಿ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) 10 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ವೆಚ್ಚ ಆಧಾರಿತ ಸಾಲ ದರ(ಎಂಸಿಎಲ್ಆರ್)ವನ್ನು 5 ಮೂಲಾಂಶಗಳಷ್ಟು ಕಡಿತಗೊಳಿಸಿದ್ದು ಹೊಸ ದರ 2017ರ ಅಕ್ಟೋಬರ್ 31ರಿಂದ ಜಾರಿಗೆ ಬರಲಿದೆ. 
ಭಾರತದ ಬ್ಯಾಂಕಿಂಗ್ ಆಸ್ತಿಯ ಐದಕ್ಕಿಂತಲೂ ಹೆಚ್ಚು ಪಾಲನ್ನು ಹೊಂದಿರುವ ಎಸ್‌ಬಿಐ ಒಂದು ವರ್ಷದ ಎಂಸಿಎಲ್ಆರ್ ಅನ್ನು ಶೇಕಡ 8ರಿಂದ 7.95ಕ್ಕೆ ಕಡಿಮೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 
ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಬ್ಯಾಂಕುಗಳಿಗೆ ಸಾಲದ ದರವನ್ನು ತಗ್ಗಿಸಲು ಮತ್ತಷ್ಟು ಆಸಕ್ತಿಯನ್ನು ಹೊಂದಿದೆ. ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ಹೂಡಿಕೆಯು ಕಳೆದ ಮೂರು ವರ್ಷಗಳಿಗಿಂತ ಹೆಚ್ಚು ನಿಧಾನವಾಗಿ ಬೆಳೆಯುತ್ತಿದೆ. ಆರು ದಶಕಗಳಲ್ಲಿ ಬ್ಯಾಂಕ್ ಸಾಲ ಕಳೆದ ಆರ್ಥಿಕ ವರ್ಷದಲ್ಲಿ ನಿಧಾನವಾಗಿ ಬೆಳೆಯಿತು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
SCROLL FOR NEXT