ವಂಚನೆ ಪ್ರಕರಣದ ವಿಚಾರಣೆಗೆ ಬಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಮೆಹ್ತಾ 
ವಾಣಿಜ್ಯ

ನೀರವ್ ಮೋದಿ ವಂಚನೆ ಬ್ಯಾಂಕ್ ಗೆ ಸಂಬಂಧಪಟ್ಟ ವಿಷಯ, ಸರ್ಕಾರದ ನೆರವು ಕೇಳುವುದಿಲ್ಲ: ಸುನಿಲ್ ಮೆಹ್ತಾ

ಶತಕೋಟಿ ಆಭರಣ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋಟಿ ...

ನವದೆಹಲಿ: ಶತಕೋಟಿ ಆಭರಣ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಿಂದ ಆಗಿರುವ ತೊಂದರೆಯನ್ನು ಸರ್ಕಾರದ ನೆರವು ಇಲ್ಲದೆ ತಾನೇ ನೋಡಿಕೊಳ್ಳಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಮೆಹ್ತಾ ತಿಳಿಸಿದ್ದಾರೆ.

ವಂಚನೆ ಪ್ರಕರಣದಿಂದ ಉಂಟಾಗಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ಬ್ಯಾಂಕಿನಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಎಂದು ಹೇಳಿದ್ದಾರೆ.

ಇದು ಬ್ಯಾಂಕಿನ ಸಮಸ್ಯೆಯಾಗಿದ್ದು ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಬಂಡವಾಳೀಕರಣದ ಮೂಲಕ ಸರ್ಕಾರದ ಸಹಾಯವನ್ನು ನಾವು ನಿರೀಕ್ಷಿಸುತ್ತಿಲ್ಲ ಎಂದು ಸುದ್ದಿಸಂಸ್ಥೆಗೆ ಉತ್ತರಿಸಿದ್ದಾರೆ.

ಮರುಸಮೀಕ್ಷೆ ಯೋಜನೆಯ ಮೂಲಕ ಸರ್ಕಾರ ಸಹಾಯ ಮಾಡಲು ಮುಂದಾಗಿತ್ತು. ಪಂಜಾಬ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾಕಷ್ಟು ಬಂಡವಾಳ ಇರುವುದರಿಂದ ನಾವು ಯಾವುದೇ ಹೆಚ್ಚುವರಿ ಬೆಂಬಲ ಮತ್ತು ನೆರವು ಕೋರಲಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್ ನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕು 12,000 ಕೋಟಿ ರೂಪಾಯಿ ಸಂಗ್ರಹಿಸಿದೆ. ಅರ್ಹವಾದ ಸಾಂಸ್ಥಿಕ ಉದ್ಯೋಗ ಮೂಲಕ 5,000ಕೋಟಿ ರೂ ಸಂಗ್ರಹಿಸಿದೆವು. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹೌಸಿಂಗ್ ಫೈನಾನ್ಸ್ ಮೂಲಕ 1,3000 ಕೋಟಿ ರೂ ಮತ್ತು ಸರ್ಕಾರದಿಂದ ಒಳಗೊಳ್ಳುವಿಕೆಯಿಂದ 5,4000 ಕೋಟಿ ರೂಪಾಯಿ ಸಿಕ್ಕಿದೆ ಎಂದು ಹೇಳಿದರು.

ಕಳೆದ ಹಣಕಾಸು ವರ್ಷದ ಮೂರು ತ್ರೈಮಾಸಿಕದಲ್ಲಿ 1,100 ಕೋಟಿ ರೂಪಾಯಿ ಜೊತೆಗೆ ಸಂಗ್ರಹಿತ ಹಣವನ್ನು ಕೂಡ ಸಂಪಾದಿಸಲಾಗಿದೆ. ಇಷ್ಟು ಹಣ ನಷ್ಟವನ್ನು ಸರಿದೂಗಿಸಲು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ಸುನಿಲ್ ಮೆಹ್ತಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT