ವಾಣಿಜ್ಯ

2018-19 ರಲ್ಲಿ ಶೇ.7.5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿರುವ ಭಾರತ: ಮೂಡೀಸ್

Srinivas Rao BV
ನವದೆಹಲಿ: 2018-19 ರಲ್ಲಿ ಭಾರತ ಶೇ.7.5 ರಷ್ಟು ಆರ್ಧಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು  ಮೂಡೀಸ್ ಹೇಳಿದೆ. 
2018-19 ನೇ ಸಾಲಿನ ಗ್ಲೋಬಲ್ ಮ್ಯಾಕ್ರೋ ಔಟ್ ಲುಕ್ ನಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ನೋಟ ನೀಡಿರುವ ಮೂಡೀಸ್, ಕಳೆದ ಕೆಲವು ತಿಂಗಳುಗಳಿಂದ ಇಂಧನ ಬೆಲೆಯಲ್ಲಿ ಉಂಟಾಗಿರುವ ಏರಿಕೆ ತಾತ್ಕಾಲಿಕವಾಗಿ ಹಣದುಬ್ಬರವನ್ನು ಏರಿಕೆ ಮಾಡಲಿದೆ. ಆದರೆ ಆರ್ಥಿಕ ಬೆಳವಣಿಗೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ. 
ಜಿ-20 ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯ ಭವಿಷ್ಯ ಅತ್ಯುತ್ತಮವಾಗಿದ್ದು, 2018 ರಲ್ಲಿ ಒಟ್ಟಾರೆ ಜಿ-20 ಬೆಳವಣಿಗೆ ಶೇ.3.3 ರಷ್ಟಿರಲಿದೆ ಹಾಗೂ 2019 ರಲ್ಲಿ ಶೇ.3.1 ರಷ್ಟಿರಲಿದೆ. ಇನ್ನು ಈಗಾಗಲೇ ಅಭಿವೃದ್ಧಿ ಸಾಧಿಸಿರುವ ರಾಷ್ಟ್ರಗಳ ಆರ್ಥಿಕತೆ 2018 ರಲ್ಲಿ ಶೇ.2.3 ರಷ್ಟು ಬೆಳವಣಿಗೆ ಸಾಧಿಸಲಿದ್ದು, 2019 ರಲ್ಲಿ ಶೇ.2 ರಷ್ಟು ಬೆಳವಣಿಗೆ ಕಾಣಲಿದೆ. ಇನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಶೇ.5.1 ರಷ್ಟಿರಲಿದ್ದು, ಭಾರತದ ಆರ್ಥಿಕತೆ  2018-19 ರಲ್ಲಿ ಶೇ.7.5 ರಷ್ಟು ಇರಲಿದೆ  ಎಂದು ಮೂಡೀಸ್ ತನ್ನ ಮುನ್ನೋಟದಲ್ಲಿ ಅಂದಾಜಿಸಿದೆ. 
SCROLL FOR NEXT