ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮತ್ತೆ ತೈಲೋತ್ಪನ್ನಗಳ ದರ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ

ಸೋಮವಾರವೂ ತೈಲೋತ್ಪನ್ನಗಳ ದರಗಳಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 27 ಪೈಸೆಯಷ್ಚು ಇಳಿಕೆ ಕಂಡಬಂದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 10 Dec 2018, 1:24 am
ನವದೆಹಲಿ: ಸೋಮವಾರವೂ ತೈಲೋತ್ಪನ್ನಗಳ ದರಗಳಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 27 ಪೈಸೆಯಷ್ಚು ಇಳಿಕೆ ಕಂಡಬಂದಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಪರಿಣಾಮ ಭಾರತೀಯ ತೈಲ ಮಾರುಕಟ್ಟೆಯಲ್ಲೂ ಇದರ ಪರಿಣಾಮ ಉಂಟಾಗಿದೆ. ಅದರಂತೆ ಭಾನವಾವರೂ ತೈಲೋತ್ಪನ್ನಗಳ ದರಗಳಲ್ಲಿ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರ 27 ಪೈಸೆಯಷ್ಚು ಇಳಿಕೆಯಾಗಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 70.37 ರೂ (24 ಪೈಸೆ ಇಳಿಕೆ), ಮತ್ತು ಡೀಸೆಲ್‌ ದರ 64.87 ರೂ (27 ಪೈಸೆ ಇಳಿಕೆ) ಇದೆ.  ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್‌ ದರ 75.95 ರೂ (23 ಪೈಸೆ ಇಳಿಕೆ), ಡೀಸೆಲ್ ಬೆಲೆ 67.86 ರೂ (29 ಪೈಸೆ ಇಳಿಕೆ) ಆಗಿದೆ.  ಕೋಲ್ಕತದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 72.42 ರೂ (23 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 66.59 ರೂ (27 ಪೈಸೆ ಇಳಿಕೆ) ಗಳಾಗಿವೆ. 

Advertisement

Advertisement

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರದ ಪೆಟ್ರೋಲ್‌ ದರ ಲೀಟರ್‌ಗೆ 70.90 ರೂ (24 ಪೈಸೆ ಇಳಿಕೆ) ಮತ್ತು ಡೀಸೆಲ್‌ ದರ 65.20 ರೂ (27 ಪೈಸೆ ಇಳಿಕೆ) ಇದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement