ಡಾಲರ್ ಎದುರು ಚೇತರಿಕೆ ಕಂಡ ಭಾರತೀಯ ರೂಪಾಯಿ ಮೌಲ್ಯ!
ಆರ್ ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕವಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಮುಂಬೈ: ಆರ್ ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕವಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಇಂದು ಷೇರುಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 42 ಪೈಸೆಯಷ್ಟು ಏರಿಕೆ ಕಂಡಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 71.59 ರೂಗಳಿಗೆ ಏರಿಕೆಯಾಗಿದೆ.
ಪ್ರಮುಖವಾಗಿ ರೂಪಾಯಿ ಮೌಲ್ಯ ಏರಿಕೆಗೆ ಅಮೆರಿಕ ಮಾರುಕಟ್ಟೆಯಲ್ಲಿನ ನೀರಸ ವಹಿವಾಟು ಕಾರಣ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗೆ ಅಮೆರಿಕ ಸರ್ಕಾರ ಕೈಗೊಂಡ ಕಠಿಣ ಆರ್ಥಿಕ ನೀತಿಯಿಂದಾಗಿ ಷೇರುಮಾರುಕಟ್ಟೆಯಲ್ಲಿ ವಹಿವಾಟು ನೀರಸಗತಿಯಲ್ಲಿ ಸಾಗಿದೆ. ಇದು ಭಾರತೀಯ ರೂಪಾಯಿ ಮೌಲ್ಯದ ಮೇಲೆಯೂ ಪರಿಣಾಮ ಬೀರಿದೆ. ಅಲ್ಲದೆ ದೇಶೀಯ ಸಂಸ್ಥೆಗಳ ಷೇರುಗಳ ಖರೀದಿಗೆ ಉಂಟಾದ ಬೇಡಿಕೆ ಕೂಡ ರೂಪಾಯಿ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬುಧವಾರವಷ್ಟೇ ರೂಪಾಯಿ ಮೌಲ್ಯದಲ್ಲಿ 16 ಪೈಸೆಯಷ್ಟು ಕುಸಿತವಾಗಿ ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 72.01 ರೂಗಳಿಗೆ ಕುಸಿದಿತ್ತು.