ಮತ್ತೆ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ದರ, ಇಂದಿನ ದರ ಪಟ್ಟಿ ಇಲ್ಲಿದ
ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯತ್ತ ಸಾಗಿದ್ದು, ಭಾನುವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಮುಂಬೈ: ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯತ್ತ ಸಾಗಿದ್ದು, ಭಾನುವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಇಂದು ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ 19 ರಿಂದ 24 ಪೈಸೆಯಷ್ಟು ಇಳಿಕೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 21 ಪೈಸೆ ಯಷ್ಟು ಇಳಿಕೆಯಾಗಿ ಪೆಟ್ರೋಲ್ ದರ ಲೀಟರ್ಗೆ 70.60 ರೂ ಗೆ ಇಳಿಕೆಯಾಗಿದೆ. ಅಂತೆಯೇ ಡೀಸೆಲ್ ದರದಲ್ಲಿ1 ಪೈಸೆಯಷ್ಟು ಇಳಿಕೆಯಾಗಿದ್ದು ಡೀಸೆಲ್ ದರ 64.33 ರೂಗೆ ಇಳಿಕೆಯಾಗಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 20 ಪೈಸೆ ಇಳಿಕೆಯೊಂದಿಗೆ 70.07 ರೂ, ಮತ್ತು ಡೀಸೆಲ್ ದರ 18 ಪೈಸೆ ಇಳಿಕೆಯೊಂದಿಗೆ 64.01 ರೂ ಗಳಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್ ದರ 75.66 ರೂ (20 ಪೈಸೆ ಇಳಿಕೆ), ಡೀಸೆಲ್ ಬೆಲೆ 66.95 ರೂ (19 ಪೈಸೆ ಇಳಿಕೆ) ಆಗಿದೆ.
ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್ ಬೆಲೆ 72.13 ರೂ (20 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 65.74 ರೂ (18 ಪೈಸೆ ಇಳಿಕೆ) ಗಳಾಗಿವೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್ ಬೆಲೆ 72.67 ರೂ. (21 ಪೈಸೆ ಇಳಿಕೆ), ಡೀಸೆಲ್ ಬೆಲೆ 67.54 ರೂ (20 ಪೈಸೆ ಇಳಿಕೆ) ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಇಂದಿನ ಬೆಲೆ 3,243 ರೂ ಆಗಿದೆ.